ಪಾಕ್ ಜೀವಶಾಸ್ತ್ರ ಟೆಕ್ಸ್ಟ್​​ ಬುಕ್​​ ವಿವಾದ..! ಏನು ಗೊತ್ತಾ..?

masthmagaa.com:

ಪಾಕಿಸ್ತಾನದಲ್ಲಿ ತೆಹ್ರೀಕ್ ಇ ಇನ್ಸಾಫ್ ಜಾರಿಗೆ ತಂದಿರೋ​​​ ಸಿಂಗಲ್ ನ್ಯಾಷನಲ್ ಕರಿಕುಲಂ ಅಂದ್ರೆ ಏಕರಾಷ್ಟ್ರೀಯ ಪಠ್ಯಕ್ರಮ ಹೊಸ ವಿವಾದಕ್ಕೆ ಕಾರಣವಾಗಿದೆ. ಏಕ ರಾಷ್ಟ್ರೀಯ ಪಠ್ಯಕ್ರಮಕ್ಕಾಗಿ ಒಂದು ಸಮಿತಿ ರಚಿಸಲಾಗಿದೆ. ಪಠ್ಯದಲ್ಲಿ ಏನೇನ್ ಇರಬೇಕು.. ಏನೇನ್ ಇರಬಾರದು ಅನ್ನೋದನ್ನ ಅವರೇ ನಿರ್ಧರಿಸ್ತಾರೆ. ಆದ್ರೆ ಈ ಸಮಿತಿ ಸದಸ್ಯರನ್ನಾಗಿ ಧಾರ್ಮಿಕ ಮುಖಂಡರನ್ನು ನೇಮಕ ಮಾಡಲಾಗಿದೆ. ಆದ್ರೆ ಅವರು ಜೀವ ಶಾಸ್ತ್ರ ಪಾಠದಲ್ಲಿ ಬರೋ ಅಂಗಾಂಗದ ವಿವರಗಳನ್ನೊಳಗೋಂಡ ರೇಖಾಚಿತ್ರಗಳನ್ನು ಬಳಸಬಾರದು. ಇದು ಅಶ್ಲೀಲತೆಯ ಸಂಕೇತ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಇಂಥಹ ಕಂಟೆಂಟ್​​ಗಳು ಮಕ್ಕಳ ಪಠ್ಯ ಕ್ರಮದಲ್ಲಿ ಇರಬಾರದು ಅಂತ ಪಠ್ಯ ಪುಸ್ತಕ ಪಬ್ಲಿಷರ್​ಗಳಿಗೆ ಸೂಚಿಸಿದ್ದಾರಂತೆ.. ಆದ್ರೆ ಈ ರೀತಿಯ ರೇಖಾಚಿತ್ರಗಳಿಲ್ಲದೇ ಬಯಾಲಜಿ ಪಾಠ ಮಾಡೋದಾದ್ರೂ ಹೇಗೆ ಅನ್ನೋದು ಪ್ರಶ್ನೆ.. ಯಾಕಂದ್ರೆ ಜೈವಿಕ ವಿಕಾಸ, ಜೀರ್ಣಾಂಗ ವ್ಯವಸ್ಥೆ, ಸಂತಾನೋತ್ಪತ್ತಿ, ಮತ್ತು ಸಸ್ತನಿ ಗ್ರಂಥಿಯನ್ನು ವಿವರಿಸಲು ಈ ರೇಖಾಚಿತ್ರಗಳು ನಿರ್ಣಾಯಕವಾಗಿವೆ. ಕಳೆದ ಮಾರ್ಚ್​​ನಲ್ಲಿ ಪ್ರೈಮರಿ ಶಾಲೆಗೆ ಸಂಬಂಧಿಸಿದಂತೆ ಪ್ರಥಮ ಹಂತದ ಏಕರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನು 6ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ 2ನೇ ಹಂತದ ಏಕರಾಷ್ಟ್ರೀಯ ಪಠ್ಯಕ್ರಮ ರೆಡಿಯಾಗ್ತಿದ್ದು, 2023ರಿಂದ ಅನ್ವಯವಾಗಲಿದೆ.

-masthmagaa.com

Contact Us for Advertisement

Leave a Reply