ಭಾರತೀಯರಲ್ಲಿ ಮನವಿ ಮಾಡಿಕೊಂಡ ಮಾಲ್ಡೀವ್ಸ್‌ ಪ್ರವಾಸೋಧ್ಯಮ!

masthmagaa.com:

ಚೀನಾ ಜೊತೆಗೆ ಸೇರ್ಕೊಂಡು ಭಾಷೆಯ ಮೇಲಿನ ಹಿಡಿತವನ್ನೇ ಕಳ್ಕೊಂಡಿದ್ದ ಮುಯಿಜು ಸರ್ಕಾರಕ್ಕೆ ಈಗ ಭಾರತದ ಬಿಸಿ ಚೆನ್ನಾಗಿ ತಾಕಿರೊ ಥರ ಕಾಣಿಸ್ತಿದೆ. ಈಗ ದಿಢೀರ್‌ ಅಂತ ಭಾರತಕ್ಕೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ್ದಾರೆ. ʻಭಾರತೀಯರೇ, ನಮ್ಮ ದೇಶಕ್ಕೆ ಬನ್ನಿ ಅಂತ ಮಾಲ್ಡೀವ್ಸ್‌ನ ಪ್ರವಾಸೋಧ್ಯಮ ಸಚಿವ ಇಬ್ರಾಹಿಂ ಫೈಸಲ್‌ ಮನವಿ ಮಾಡ್ಕೊಂಡಿದ್ದಾರೆ. ʻಮಾಲ್ಡೀವ್ಸ್‌ ಟೂರಿಸಂನ್ನೇ ನಂಬಿರೋ ದೇಶ, ದಯವಿಟ್ಟು ಭಾರತೀಯರೇ ಮಾಲೀವ್ಸ್‌ಗೆ ಬಂದು…ನಮ್ಮ ಟೂರಿಸಂನ ಭಾಗವಾಗಿ.. ಹೊಸತಾಗಿ ರಚನೆಗೊಂಡಿರೋ ಮಾಲ್ಡೀವ್ಸ್‌ ಸರ್ಕಾರಕ್ಕೂ ಭಾರತದ ಜೊತೆ ಕೆಲಸ ಮಾಡೋಕೆ ಇಷ್ಟವಿದೆ. ಭಾರತೀಯರು ಮಾಲ್ಡೀವ್ಸ್‌ಗೆ ಬಂದ್ರೆ ಇಲ್ಲಿನ ಸರ್ಕಾರ ಮತ್ತು ಇಲ್ಲಿನ ಜನರು ಹೃದಯಪೂರ್ವಕ ಸ್ವಾಗತ ನೀಡ್ತೀವಿ ಅಂತೇಳಿದ್ದಾರೆ. ಅಷ್ಟೇ ಅಲ್ಲ ಭಾರತಕ್ಕೂ ನಮಗೂ ಐತಿಹಾಸಿಕ ಸಂಬಂಧ ಇದೆ. ನಾವು ನೆರೆಹೊರೆ ಜೊತೆಗೆ ಸಹಕಾರದಿಂದ ಇರೋದು ಮುಖ್ಯ ಅಂತ ಭಾರತದ ಪರ ಬ್ಯಾಟ್‌ ಬೀಸಿದ್ದಾರೆ. ಈ ಮೂಲಕ ಭಾರತೀಯರ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಮಾಲ್ಡೀವ್ಸ್‌ಗೆ ದುಬಾರಿಯಾಗಿರೋದು ಸಧ್ಯಕ್ಕೆ ಕಾಣಿಸ್ತಿದೆ. ಯಾಕಂದ್ರೆ ಮಾಲ್ಡೀವ್ಸ್‌ನಲ್ಲಿ ಚೈನಾ ಪರ ಅಧ್ಯಕ್ಷ ಮೊಹ್ಮದ್‌ ಮೊಯಿಜು ಅಧಿಕಾರಕ್ಕೆ ಬಂದ ಮೇಲೆ ಭಾರತ ಹಾಗೂ ಮಾಲ್ಡೀವ್ಸ್‌ ನಡುವಿನ ಸಂಬಂಧದಲ್ಲಿ ಭಾರೀ ಏರುಪೇರಾಗಿದ್ದು ನಿಮಗೆ ಗೊತ್ತು. ಭಾರತವನ್ನ ʻಬುಲ್ಲಿ ಅಂತೆಲ್ಲಾ ಕರೆದಿದ್ದ ಮುಯಿಜು, ಹಿಂದೂ ಮಹಾಸಾಗರ ಯಾರೋ ಒಬ್ರಿಗೇ ಸೇರಿಲ್ಲ..ನಾವೂ ಇದ್ದೀವಿ ಅಂತ ಅಧಿಕಪ್ರಸಂಗತನದ ಹೇಳಿಕೆ ಕೊಟ್ಟಿದ್ರು. ಅದಾದ ಮೇಲೆ ಲಕ್ಷದ್ವೀಪ ಫ್ಯಾಕ್ಟರ್‌ ಆಯ್ತು, ಭಾರತದ ಪ್ರಧಾನಿಯನ್ನ ಮಾಲ್ಡೀವ್ಸ್‌ ಸಚಿವರು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ರು. ಅದಕ್ಕೆ ಪ್ರತಿಯಾಗಿ ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾಗಿತ್ತು.

ಅಲ್ಲಿಂದ ಭಾರತದಿಂದ ಮಾಲ್ಡೀವ್ಸ್‌ಗೆ ಹೋಗೋರ ಸಂಖ್ಯೆ ಅರ್ಧಕ್ಕರ್ಧ ಕಮ್ಮಿಯಾಗಿತ್ತು. ಈ ಎಲ್ಲದರ ನಡುವೆ ಕೂಡ ಮುಯಿಜು ಸರ್ಕಾರ ಭಾರತ ವಿರುದ್ದ ಹೇಳಿಕೆ ಕೊಡ್ತಾನೆ ಬಂದಿದ್ರು. ಚೀನಾಗೆ ಹೋಗಿ ಚೀನಿಯರು ನಮ್ಮ ಟೂರಿಸಂ ಇಂಪ್ರೂ ಮಾಡಬೇಕು ಅಂತ ಖುದ್ದು ಮುಯಿಜು ಕೇಳ್ಕೊಂಡ್ರು. ಆದ್ರೆ ಅದ್ಯಾವುದು ಪ್ರಯೋಜನೆಕ್ಕೆ ಬಂದಿಲ್ಲ ಅನ್ನೋದು ಕಾಣಿಸ್ತಿದೆ. ಈಗ ಭಾರತವನ್ನ ((ಗೋಗರಿದಿದ್ದಾರೆ)). ಅಂದ್ಹಾಗೆ ಮಾಲ್ಡೀವ್ಸ್‌ನಲ್ಲಿ ಇತ್ತೀಚಿಗೆ ಆರ್ಥಿಕ ಪರಿಸ್ಥಿತಿ ಕೂಡ ಸರಿ ಇಲ್ಲ. ಚೀನಾ ಸಾಲ ಮಾಲ್ಡೀವ್ಸ್‌ನ ಕುತ್ತಿಗೆ ಹಿಸುಕ್ತಿದೆ. ಮೊನ್ನೆ ಇದಕ್ಕೆ ವಲ್ಡ್‌ ಬ್ಯಾಂಕ್‌ ಕೂಡ ಎಚ್ಚರಿಕೆ ಕೊಟ್ಟಿತ್ತು. ಈ ನಡುವೆ ಭಾರತೀಯರೂ ಕೈ ಕೊಟ್ಟಿದ್ದು ಮಾಲ್ಡೀವ್ಸ್‌ಗೆ ಭಾರಿ ಪೆಟ್ಟು ಕೊಟ್ಟಿತ್ತು. ಈ ಕಾರಣದಿಂದ ಮಾಲ್ಡೀವ್ಸ್‌ ಈಗ ಭಾರತಕ್ಕೆ ಮನವಿ ಮಾಡಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply