ಇರಾನ್‌ಗೆ ಭೇಟಿ ನೀಡಿದ IAEA ಮುಖ್ಯಸ್ಥರಾದ ರಾಫೆಲ್‌ ಗ್ರಾಸಿ!

masthmagaa.com:

ಮಿಡಲ್‌ಈಸ್ಟ್‌ನಲ್ಲಿ ಉದ್ವಿಗ್ನತೆಯ ನಡುವೆಯೇ ಇದೀಗ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಯ (IAEA) ಮುಖ್ಯಸ್ಥರಾದ ರಾಫೆಲ್‌ ಗ್ರಾಸ್ಸಿ ಇರಾನ್‌ಗೆ ಭೇಟಿ ನೀಡಿದ್ದಾರೆ. ಇರಾನ್‌ಲ್ಲಿ ಮೊದಲ ಬಾರಿಗೆ ನ್ಯೂಕ್ಲಿಯರ್‌ ಸೈನ್ಸ್‌ ಮತ್ತು ಟೆಕ್ನಾಲಜಿ ಮೇಲೆ ನಡೀತಿರೋ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ನಲ್ಲಿ ರಾಫೆಲ್‌ ಗ್ರಾಸ್ಸಿ ಭಾಗಿಯಾಗಲಿದ್ದಾರೆ. ಈ ಮೂಲಕ ಇರಾನ್‌ ಮತ್ತು IAEA ನಡುವಿನ ಹದಗೆಟ್ಟ ಸಂಬಂಧ ಸರಿಪಡಿಸಿ, ಎರಡರ ನಡುವೆ ಸಹಕಾರ ಮತ್ತು ಪಾರದರ್ಶಕತೆ ವೃದ್ಧಿಸೋದು ಈ ಭೇಟಿಯ ಪ್ರಮುಖ ಉದ್ದೇಶ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply