ಪುಟಿನ್‌ಗೆ 5ನೇ ಪಟ್ಟಾಭಿಷೇಕ! ತಡೆಯಾದ US, UK ಮತ್ತು EU ದೇಶಗಳು!

masthmagaa.com:

ರಷ್ಯಾ ಸಾರ್ವಭೌಮ ವ್ಲಾಡಿಮಿರ್‌ ಪುಟಿನ್‌ಗೆ 5ನೇ ಬಾರಿಗೆ ಪಟ್ಟಾಭಿಷೇಕ ನಡೆಸೋಕೆ ಸಕಲ ತಯಾರಿಗಳು ನಡೀತಾ ಇವೆ. ಕೆಲ ದಿನಗಳ ಹಿಂದೆ ನಡೆದ ʻಚುನಾವಣೆʼಯಲ್ಲಿ ಪುಟಿನ್‌ ಮತ್ತೊಮ್ಮೆ ಆಯ್ಕೆಯಾಗಿದ್ರು. ಈಗ ಅದರ ಪದಗ್ರಹಣದ ಕಾರ್ಯಕ್ರಮ ನಡೀತಾ ಇದೆ. ಮೇ 7ರಿಂದ ಪುಟಿನ್‌ 5ನೇ ಬಾರಿಗೆ ಅಧ್ಯಕ್ಷರಾಗಲಿದ್ದು ಈ ಫನ್ಷನ್‌ಗೆ ಹಲವು ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಆದ್ರೆ ಯುಕೆ ಅಮೆರಿಕ ಮತ್ತು ಯುರೋಪಿಯನ್‌ ಯೂನಿಯನ್‌ ದೇಶಗಳು ಪುಟಿನ್‌ರ ಕಾರ್ಯಕ್ರಮವನ್ನ ಬಾಯ್ಕಾಟ್‌ ಮಾಡಿವೆ. ನಮ್ಮ ರಾಯಭಾರಿಗಳು ಅಲ್ಲಿಗೆ ಹೋಗಲ್ಲ ಅಂತೇಳಿವೆ. ಇನ್ನೊಂದು ಕಡೆ ಪುಟಿನ್‌ ಮತ್ತೊಮ್ಮೆ ಜಗತ್ತಿಗೆ ಅಣ್ವಸ್ತ್ರ ಭಯ ಹುಟ್ಟಿಸಿದ್ದಾರೆ. ಹೊಸದಾಗಿ ಈಗ ನ್ಯುಕ್ಲಿಯರ್‌ ಸಮರಾಭ್ಯಾಸಕ್ಕೆ ಆದೇಶ ನೀಡಿದ್ದಾರೆ. ಈ ಅಭ್ಯಾಸದಲ್ಲಿ ಯುಕ್ರೇನ್‌ನಲ್ಲಿ ನಿಯೋಜಿಸಲಾಗಿರೋ ನೌಕಾ ಮತ್ತು ಸೇನಾ ಪಡೆಗಳನ್ನ ಕೂಡ ಇನ್ವಾಲ್ವ್‌ ಮಾಡಲಾಗುತ್ತೆ ಅಂತ ರಷ್ಯಾ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ʻನಮಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಬೆದರಿಕೆ ಇದೆ. ರಷ್ಯಾದ ಪ್ರಾದೇಶಿಕ ಸಮಗ್ರತೆಯನ್ನ ಕಾಪಾಡೋಕೆ ನಾವು ಈ ಅಭ್ಯಾಸ ಮಾಡ್ತಿದ್ದೀವಿʼ ಅಂತ ಸಚಿವಾಲಯ ತಿಳಿಸಿದೆ.

-masthmagaa.com

Contact Us for Advertisement

Leave a Reply