ಇರಾನ್‌ ಹಡಗನ್ನ ವಶಪಡಿಸಿಕೊಂಡ ಭಾರತೀಯ ಕೋಸ್ಟ್‌ ಗಾರ್ಡ್‌!

masthmagaa.com:

ಅರಬ್ಬಿ ಸಮುದ್ರದಲ್ಲಿ ಸಿನಿಮೀಯ ರೀತಿಯ ಘಟನೆ ನಡೆದಿದೆ. ಹಡಗಿನ ಮಾಲೀಕ ಕಿರುಕುಳ ಕೊಟ್ಟ ಅಂತೇಳಿ‌ ಮೀನುಗಾರರ ಗುಂಪೊಂದು ಇರಾನ್‌ನಿಂದಲೇ ಹಡಗನ್ನ ಎಗರಿಸಿಕೊಂಡು ಬಂದಿದ್ದಾರೆ. ಆ ಹಡಗನ್ನ ಈಗ ಭಾರತದ ಕೋಸ್ಟ್‌ ಗಾರ್ಡ್ ಕೇರಳದ ಕರಾವಳಿಯಲ್ಲಿ ವಶಕ್ಕೆ ಪಡೆದಿದೆ. ಅಂದ್ಹಾಗೆ ಕನ್ಯಾಕುಮಾರಿ ಮೂಲದ 6 ಮೀನುಗಾರರು, ವಶಕ್ಕೆ ಪಡೆಯಲಾಗಿರೋ ಇರಾನ್‌ ಹಡಗಿನ ಓನರ್‌ ಜೊತೆ ಕಾಂಟ್ರ್ಯಾಕ್ಟ್‌ ಮಾಡಿಕೊಂಡಿದ್ರು. ಇರಾನ್‌ ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಡೆಸೋಕೆ ಹಡಗಿನ ಮಾಲೀಕ ಈ ಆರು ಮೀನುಗಾರರಿಗೆ ಮಾರ್ಚ್‌ ತಿಂಗಳಲ್ಲಿ ಇರಾನ್‌ನ ವೀಸಾ ನೀಡಿದ್ದ. ಆದ್ರೆ ಆ ನಂತ್ರ ಈತ ಕೆಟ್ಟದಾಗಿ ನಡೆದುಕೊಂಡಿದ್ದ. ಮೂಲಭೂತ ಸೌಕರ್ಯಗಳನ್ನೂ ನೀಡದೇ, ಪಾಸ್‌ಪೋರ್ಟ್‌ಗಳನ್ನ ಕೂಡ ಕಸಿದುಕೊಂಡಿದ್ದ..ಹೀಗಾಗಿ ಆತನಿಂದ ತಪ್ಪಿಸಿಕೊಳ್ಳೋಕೆ ಈ ಆರು ಮಂದಿ ಮೀನುಗಾರರು ಇರಾನ್‌ನಿಂದ ಎಸ್ಕೇಪ್‌ ಆಗಿ ಭಾರತಕ್ಕೆ ಬರಲು ಡಿಸೈಡ್‌ ಮಾಡಿದ್ದಾರೆ. ಅದರಂತೆ ಮಾಲೀಕನ ಹಡಗನ್ನೇ ಎಗರಿಸ್ಕೊಂಡು… ಅದರಲ್ಲೇ ಭಾರತಕ್ಕೆ ಬರಲು ಟ್ರೈ ಮಾಡಿದ್ದಾರೆ. ಈ ವಿಚಾರವೆಲ್ಲಾ ಈಗ ಪ್ರಾಥಮಿಕ ತನಿಖೆಯಲ್ಲಿ ರಿವೀಲ್‌ ಆಗಿದೆ. ಸದ್ಯ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾದ ಇರಾನ್‌ ಹಡಗನ್ನ ಕೇರಳದ ಕೊಚ್ಚಿಗೆ ತರಲಾಗಿದೆ.

-masthmagaa.com

Contact Us for Advertisement

Leave a Reply