masthmagaa.com:
ಮೊದಲು ಚೀನಾವನ್ನು ವಿಲನ್ ರೀತಿ ಬಿಂಬಿಸೋದನ್ನು ಬಿಡಿ ಅಂತ ಚೀನಾ ಅಮೆರಿಕಗೆ ಒತ್ತಾಯಿಸಿದೆ. ಅಮೆರಿಕದ ಡೆಪ್ಯುಟಿ ಸೆಕ್ರೆಟರಿ ವೆಂಡಿ ಶೆರ್ಮನ್ ನಿನ್ನೆ ಚೀನಾ ಪ್ರವಾಸ ಕೈಗೊಂಡಿದ್ದು, ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಜಗತ್ತಿನ 2 ಶಕ್ತಿಶಾಲಿ ದೇಶಗಳ ನಡುವಿನ ಆರ್ಥಿಕ ಕ್ಷೇತ್ರದಲ್ಲಿ ಉಂಟಾಗಿರೋ ಸಂಘರ್ಷದ ಕುರಿತು ಮಾತುಕತೆ ನಡೆಸೋ ಉದ್ದೇಶವನ್ನು ಶೆರ್ಮನ್ ಆದ್ರೆ ಈ ಭೇಟಿ ಕುರಿತು ಚೀನೀ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಅದ್ರ ಪ್ರಕಾರ ಚೀನಾ ವಿದೇಶಾಂಗ ಇಲಾಖೆಯ ಉಪಸಚಿವ ಶಾಯಿ ಫೆಂಗ್, ವೆಂಡಿ ಶೆರ್ಮನ್ಗೆ ಖಾರ ಖಾರವಾಗಿ ಮಾತಾಡಿದ್ದಾರೆ. ಅಮೆರಿಕ ತನ್ನದೇ ಆದ ಸಮಸ್ಯೆಗಳಿಗೆ ಚೀನಾವನ್ನು ದೂಷಿಸುತ್ತಿದೆ. ಚೀನಾವನ್ನು ಕಾಲ್ಪನಿಕ ಶತ್ರು ರೀತಿ ನೋಡುತ್ತೆ.. ಈ ರೀತಿ ಚಿನಾವನ್ನು ಟಾರ್ಗೆಟ್ ಮಾಡೋದನ್ನು ಫಸ್ಟ್ ಬಿಡಬೇಕು. ಅಮೆರಿಕ ತನ್ನ ಮಿಸ್ಗೈಡೆಡ್ ಮೈಂಡ್ಸೆಟ್ನಿಂದ ಹೊರಬರಬೇಕು. ತನ್ನ ಅಪಾಯಕಾರಿ ನೀತಿಗಳನ್ನು ಕೂಡ ಬಿಡಬೇಕು ಅಂತ ಹೇಳಿದ್ದಾರೆ. ಇನ್ನು ನಿನ್ನೆ ಟ್ವೀಟ್ ಮಾಡಿದ್ದ ವೆಂಡಿ ಶೆರ್ಮನ್, ನಾನು ಚೀನಾ ವಿದೇಶಾಂಗ ಸಚಿವ ವಾಂಗ್ ಇ ಅವರನ್ನೂ ಕೂಡ ಭೇಟಿಯಾಗಿದ್ದು, ಅಮೆರಿಕ ಮೂಲದ ಉದ್ಯಮಿಗಳು ಚೀನಾದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತಾಡಿದ್ದೇನೆ. ಚೀನಾದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಮಡಿದವರಿಗೂ ಸಂತಾಪ ಸೂಚಿಸಿದ್ದೇನೆ ಅಂತ ಹೇಳಿದ್ರು.
-masthmagaa.com
Contact Us for Advertisement