ಅಮೆರಿಕಗೆ ಖಾರವಾಗಿ ಉತ್ತರ ಕೊಟ್ಟ ಚೀನಾ! ಏನು ಗೊತ್ತಾ?

masthmagaa.com:

ಮೊದಲು ಚೀನಾವನ್ನು ವಿಲನ್ ರೀತಿ ಬಿಂಬಿಸೋದನ್ನು ಬಿಡಿ ಅಂತ ಚೀನಾ ಅಮೆರಿಕಗೆ ಒತ್ತಾಯಿಸಿದೆ. ಅಮೆರಿಕದ ಡೆಪ್ಯುಟಿ ಸೆಕ್ರೆಟರಿ ವೆಂಡಿ ಶೆರ್ಮನ್​​ ನಿನ್ನೆ ಚೀನಾ ಪ್ರವಾಸ ಕೈಗೊಂಡಿದ್ದು, ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಜಗತ್ತಿನ 2 ಶಕ್ತಿಶಾಲಿ ದೇಶಗಳ ನಡುವಿನ ಆರ್ಥಿಕ ಕ್ಷೇತ್ರದಲ್ಲಿ ಉಂಟಾಗಿರೋ ಸಂಘರ್ಷದ ಕುರಿತು ಮಾತುಕತೆ ನಡೆಸೋ ಉದ್ದೇಶವನ್ನು ಶೆರ್ಮನ್ ಆದ್ರೆ ಈ ಭೇಟಿ ಕುರಿತು ಚೀನೀ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಅದ್ರ ಪ್ರಕಾರ ಚೀನಾ ವಿದೇಶಾಂಗ ಇಲಾಖೆಯ ಉಪಸಚಿವ ಶಾಯಿ ಫೆಂಗ್​, ವೆಂಡಿ ಶೆರ್ಮನ್​​ಗೆ ಖಾರ ಖಾರವಾಗಿ ಮಾತಾಡಿದ್ದಾರೆ. ಅಮೆರಿಕ ತನ್ನದೇ ಆದ ಸಮಸ್ಯೆಗಳಿಗೆ ಚೀನಾವನ್ನು ದೂಷಿಸುತ್ತಿದೆ. ಚೀನಾವನ್ನು ಕಾಲ್ಪನಿಕ ಶತ್ರು ರೀತಿ ನೋಡುತ್ತೆ.. ಈ ರೀತಿ ಚಿನಾವನ್ನು ಟಾರ್ಗೆಟ್ ಮಾಡೋದನ್ನು ಫಸ್ಟ್ ಬಿಡಬೇಕು. ಅಮೆರಿಕ ತನ್ನ ಮಿಸ್​​ಗೈಡೆಡ್​ ಮೈಂಡ್​ಸೆಟ್​​ನಿಂದ ಹೊರಬರಬೇಕು. ತನ್ನ ಅಪಾಯಕಾರಿ ನೀತಿಗಳನ್ನು ಕೂಡ ಬಿಡಬೇಕು ಅಂತ ಹೇಳಿದ್ದಾರೆ. ಇನ್ನು ನಿನ್ನೆ ಟ್ವೀಟ್ ಮಾಡಿದ್ದ ವೆಂಡಿ ಶೆರ್ಮನ್​​, ನಾನು ಚೀನಾ ವಿದೇಶಾಂಗ ಸಚಿವ ವಾಂಗ್ ಇ ಅವರನ್ನೂ ಕೂಡ ಭೇಟಿಯಾಗಿದ್ದು, ಅಮೆರಿಕ ಮೂಲದ ಉದ್ಯಮಿಗಳು ಚೀನಾದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತಾಡಿದ್ದೇನೆ. ಚೀನಾದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಮಡಿದವರಿಗೂ ಸಂತಾಪ ಸೂಚಿಸಿದ್ದೇನೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply