masthmagaa.com:
ಬಲೂಚಿಸ್ತಾನದ ಗ್ವಾದರ್ನಲ್ಲಿ ಆತ್ಮಾಹುತಿ ದಾಳಿಕೋರನೊಬ್ಬ ಚೀನೀ ಮೂಲದ ಕಾರ್ಮಿಕರನ್ನು ಹೊತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದಾನೆ. ಇದ್ರಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಓರ್ವ ಚೀನೀ ಪ್ರಜೆ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಕಳೆದೊಂದು ತಿಂಗಳಲ್ಲಿ ಚೀನೀಯರ ಮೇಲೆ ನಡೆದ 2ನೇ ದಾಳಿ ಇದಾಗಿದೆ. ಕಳೆದ ತಿಂಗಳು ಖೈಬರ್ ಪಖ್ತುಂಕ್ವಾದಲ್ಲಿ ನಡೆದ ದಾಳಿಯಲ್ಲಿ 9 ಚೀನೀಯರು ಸೇರಿದಂತೆ 13 ಮಂದಿ ಪ್ರಾಣ ಕಳೆದುಕೊಂಡಿದ್ರು. ಈ ಭಾಗದಲ್ಲಿ ತಾಲಿಬಾನಿಗಳು ಮತ್ತು ಬಲೂಚಿಸ್ತಾನ ಪ್ರತ್ಯೇಕತಾವಾದಿಗಳು ಆಗಾಗ ದಾಳಿ ನಡೆಸ್ತಿರ್ತಾರೆ.
-masthmagaa.com
Contact Us for Advertisement