masthmagaa.com:
ಮಯನ್ಮಾರ್ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ವಶಕ್ಕೆ ಪಡೆಯಲಾಗಿದ್ದ ಫೋಟೋಗ್ರಾಫರ್ ಒಬ್ಬ ಪೊಲೀಸ್ ಕಸ್ಟಡಿಯಲ್ಲಿ ಪ್ರಾಣ ಬಿಟ್ಟಿದ್ದಾನೆ. ಸೋ ನೈಂಗ್ ಅನ್ನೋ ಗ್ರಾಫಿಕ್ ಡಿಸೈನರ್, ಮಿಲಿಟರಿ ಆಡಳಿತದ ವಿರುದ್ಧದ ಪ್ರತಿಭಟನೆಯನ್ನು ಸೆರೆ ಹಿಡಿಯುತ್ತಿದ್ದರು. ಹೀಗಾಗಿ ಕಳೆದ ಶುಕ್ರವಾರ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಬಂದ ಭದ್ರತಾ ಸಿಬ್ಬಂದಿ ಸಾವಿನ ಸುದ್ದಿ ತಿಳಿಸಿದ್ದಾರೆ. ಆದ್ರೆ ಡೆಡ್ಬಾಡಿಯನ್ನು ಇನ್ನೂ ನೀಡಿಲ್ಲ ಅಂತ ಸ್ಥಳೀಯರು ತಿಳಿಸಿದ್ದಾರೆ. ಆದ್ರೆ ಈ ಆರೋಪದ ಬಗ್ಗೆ ಮಯನ್ಮಾರ್ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
-masthmagaa.com
Contact Us for Advertisement