masthmagaa.com:
ಆಫ್ರಿಕಾ ಖಂಡದ ದ್ವೀಪರಾಷ್ಟ್ರ ಮಡಗಾಸ್ಕರ್ನಲ್ಲಿ ಚಂಡಮಾರುತದ ಅಬ್ಬರಕ್ಕೆ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಸುಮಾರು 50 ಸಾವಿರ ಜನ ಮನೆಗಳನ್ನ ಬಿಟ್ಟು ಬೇರೆಕಡೆ ಹೋಗುವಂತಾಗಿದೆ. ಬಟ್ಸಿರಾಯಿ ಅನ್ನೋ ಚಂಡಮಾರುತದ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅದ್ರಲ್ಲೂ ಸೈಕ್ಲೋನ್ ಭೂಸ್ಪರ್ಶ ಮಾಡಿದ ಕರಾವಳಿ ನಗರ ಮನಂಜರಿ ಎಂಬಲ್ಲಿ ಎಲ್ಲವೂ ನಾಶವಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಬರುವ ಮಡಗಾಸ್ಕರ್ಗೆ ಒಂದು ವಾರದ ಹಿಂದಷ್ಟೇ ಮತ್ತೊಂದು ಚಂಡಮಾರುತ ಅಪ್ಪಳಿಸಿತ್ತು.
-masthmagaa.com
Contact Us for Advertisement