ಮಡಗಾಸ್ಕರ್​ನಲ್ಲಿ ಚಂಡಮಾರುತ.. ಕರಾವಳಿ ನಗರ ಸಂಪೂರ್ಣ ನಾಶ!

masthmagaa.com:

ಆಫ್ರಿಕಾ ಖಂಡದ ದ್ವೀಪರಾಷ್ಟ್ರ ಮಡಗಾಸ್ಕರ್​ನಲ್ಲಿ ಚಂಡಮಾರುತದ ಅಬ್ಬರಕ್ಕೆ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಸುಮಾರು 50 ಸಾವಿರ ಜನ ಮನೆಗಳನ್ನ ಬಿಟ್ಟು ಬೇರೆಕಡೆ ಹೋಗುವಂತಾಗಿದೆ. ಬಟ್​ಸಿರಾಯಿ ಅನ್ನೋ ಚಂಡಮಾರುತದ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅದ್ರಲ್ಲೂ ಸೈಕ್ಲೋನ್​ ಭೂಸ್ಪರ್ಶ ಮಾಡಿದ ಕರಾವಳಿ ನಗರ ಮನಂಜರಿ ಎಂಬಲ್ಲಿ ಎಲ್ಲವೂ ನಾಶವಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಬರುವ ಮಡಗಾಸ್ಕರ್​ಗೆ ಒಂದು ವಾರದ ಹಿಂದಷ್ಟೇ ಮತ್ತೊಂದು ಚಂಡಮಾರುತ ಅಪ್ಪಳಿಸಿತ್ತು.

-masthmagaa.com

Contact Us for Advertisement

Leave a Reply