ಎಲೆಕ್ಟ್ರಿಕ್‌ ಪ್ರಪಲ್ಶನ್‌ ಸಿಸ್ಟಮ್‌ ಅಭಿವೃದ್ಧಿಗೆ ಮುಂದಾದ ಭಾರತ-ಬ್ರಿಟನ್‌

masthmagaa.com:

ಭಾರತ ನೌಕಾಪಡೆಗೆ ಇನ್ನಷ್ಟು ಶಕ್ತಿ ತುಂಬೋಕೆ ಇದೀಗ ಭಾರತ ಮತ್ತು ಬ್ರಿಟನ್‌ ಮಹತ್ವದ ಒಪ್ಪಂದಕ್ಕೆ ಕೈ ಹಾಕೋ ಲಕ್ಷಣಗಳು ಕಾಣ್ತಿವೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಬಲಪಡಿಸೋಕೆ ಮುಂದಾಗ್ತಿವೆ. ಎಸ್‌… ಭಾರತದ ನೇವಿಯಲ್ಲಿರೋ ಯುದ್ಧನೌಕೆಗಳಿಗೆ ಹೆಚ್ಚಿನ ಪವರ್‌ ನೀಡಲು ಈಗ ಎಲೆಕ್ಟ್ರಿಕ್‌ ಪ್ರಪಲ್ಶನ್‌ ಸಿಸ್ಟಮ್‌ ಅಭಿವೃದ್ಧಿ ಪಡಿಸೋಕೆ ಭಾರತ ಮತ್ತು ಬ್ರಿಟನ್‌ ಡಿಸ್‌ಕಸ್‌ ಮಾಡ್ತಿವೆ. ಇದುವರೆಗೆ ಭಾರತದ ನೇವಿಯಲ್ಲಿರೋ ಎಲ್ಲಾ ಯುದ್ಧನೌಕೆಗಳು ಡೀಸೆಲ್‌ ಇಂಜಿನ್‌, ಗ್ಯಾಸ್‌ ಟರ್ಬೈನ್‌ ಅಥ್ವಾ ಸ್ಟೀಮ್‌ ಟರ್ಬೈನ್‌ ಸಹಾಯದಿಂದ ಚಲಿಸ್ತಿದ್ವು. ಆದ್ರೆ ಇದೀಗ 6,000 ಟನ್‌ಗೂ ಅಧಿಕ ತೂಕದ ಬೃಹದ್‌ ಗಾತ್ರದ ಯುದ್ಧನೌಕೆಗಳಿಗೆ ಶಕ್ತಿ ತುಂಬೋ ಕೆಲಸವನ್ನ ಈ ಎಲೆಕ್ಟ್ರಿಕ್‌ ಪ್ರಪಲ್ಶನ್‌ ಸಿಸ್ಟಮ್‌ ಮಾಡಲಿದೆ. ಕಳೆದ ತಿಂಗಳು ಬ್ರಿಟನ್‌ ಭಾರತ ಸರ್ಕಾರಕ್ಕೆ ಈ ರೀತಿ ಸಿಸ್ಟಮ್‌ನ್ನ ಡೆವಲಪ್‌ ಮಾಡೋ ಬಗ್ಗೆ ಪತ್ರವೊಂದನ್ನ ಕಳಿಸಿತ್ತು ಅಂತ ಭಾರತದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಭಾರತದ ಅಧಿಕಾರಿಗಳು ಈ ಪ್ರಸ್ತಾವನೆಯನ್ನ ಪರಿಶೀಲಿಸ್ತಿದ್ದು, ನಂತ್ರ ಒಪ್ಪಂದವನ್ನ ಫೈನಲ್‌ ಮಾಡಲಾಗುತ್ತೆ. ಒಮ್ಮೆ ಈ ಒಪ್ಪಂದಕ್ಕೆ ಸೈನ್‌ ಹಾಕಿದ ನಂತ್ರ, ಬ್ರಿಟನ್‌ನ ʻGE ಪವರ್‌ ಕನ್ವರ್ಷನ್‌ʼ ಮತ್ತು ಭಾರತದ ʻಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ʼ ಕಂಪನಿಗಳು ಜಂಟಿಯಾಗಿ ಎಲೆಕ್ಟ್ರಿಕ್‌ ಪ್ರಪಲ್ಶನ್‌ ಸಿಸ್ಟಮ್‌ ಡೆವಲಪ್‌ ಮಾಡಲಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply