LACನಲ್ಲಿ ಚೀನಾ ಚಟುವಟಿಕೆ ಹೆಚ್ಚುತ್ತಿದೆ! ಸ್ಯಾಟಲೈಟ್‌ ಇಮೇಜ್‌ಲ್ಲಿ ಪತ್ತೆ!

masthmagaa.com:

LAC ಅಥ್ವಾ ಲೈನ್‌ ಆಫ್‌ ಆಕ್ಚುಚಲ್‌ ಕಂಟ್ರೋಲ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಹಾಗೇ ಉಳಿದಿದ್ದು, ಈ ಭಾಗದಲ್ಲಿ ಚೀನಾ ತನ್ನ ಕುತಂತ್ರ ಬುದ್ದಿಯನ್ನ ಮುಂದುವರೆಸಿದೆ. ಗಲ್ವಾನ್‌ ಸಂಘರ್ಷದ ನಂತ್ರ ಈ ಭಾಗದಲ್ಲಿ ಚೀನಾ ತನ್ನ ಚಟುವಟಿಕೆ ಜಾಸ್ತಿಮಾಡಿದೆ… ತನಗೆ ಬೇಕಾಗಿರೋ ಮೂಲಭೂತಸೌಕರ್ಯಗಳನ್ನ ನಿರ್ಮಾಣ ಮಾಡ್ತಿದೆ. ʻಕ್ಸಿಯಾಕಾಂಗ್‌ʼ ಅನ್ನೋ ಹಳ್ಳಿ ನಿರ್ಮಾಣ ಮಾಡ್ತಿದ್ದು, ಇದನ್ನ ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗೆ ಬಳಸ್ತಿದೆ ಎನ್ನಲಾಗ್ತಿದೆ. ಇತ್ತೀಚೆಗೆ ತೆಗೆದ ಸ್ಯಾಟಲೈಟ್‌ ಇಮೇಜ್‌, 3,488ಕಿಮೀ ಉದ್ದಕ್ಕೂ, ಅಂದ್ರೆ ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೂ ಚೀನಾ ಕೈಗೊಂಡಿರೋ ಚಟುವಟಿಕೆಗಳನ್ನ ತೋರಿಸಿದೆ. ಇದ್ರಲ್ಲಿ ಚೀನಾ ಇತ್ತೀಚೆಗೆ ಸ್ಯಾಮ್‌ಜಂಗ್ಲಿಂಗ್‌ನಿಂದ ಗಲ್ವಾನ್‌ ಕಣಿವೆ 15 ಕಿ.ಮೀನ ಒಂದು ರಸ್ತೆಯನ್ನ ನಿರ್ಮಿಸಿದೆ.

-masthmagaa.com

Contact Us for Advertisement

Leave a Reply