ಗಂಡನ ಅರೆಸ್ಟ್​ಗೂ ಮುನ್ನ ಶಿಲ್ಪಾ ಶೆಟ್ಟಿ ಹಾಕಿದ್ದ ಇನ್​ಸ್ಟಾ ಪೋಸ್ಟ್​​ ಏನ್ ಗೊತ್ತಾ?

masthmagaa.com:

ನೀಲಿಚಿತ್ರಗಳ ನಿರ್ಮಾಣ ಕೇಸಲ್ಲಿ ಉದ್ಯಮಿ, ಶಿಲ್ಪಾಶೆಟ್ಟಿ ಗಂಡ ರಾಜ್​ಕುಂದ್ರಾರನ್ನು ಅರೆಸ್ಟ್ ಮಾಡಲಾಗಿದೆ. ಕೋರ್ಟ್​ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಖಾಕಿ ಪಡೆ ತನಿಖೆ ನಡೆಸ್ತಿದೆ. ಆದ್ರೀಗ ಶಿಲ್ಪಾ ಶೆಟ್ಟಿ ತನ್ನ ಪತಿಯ ಬಂಧನಕ್ಕೆ ಹಾಕಿದ್ದ ಒಂದು ಪೋಸ್ಟ್​ ಈಗ ಎಲ್ಲರ ಗಮನ ಸೆಳೀತಾ ಇದೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದ ಶಿಲ್ಪಾ, ನಾವು ನಮ್ ಸುತ್ತಾ ಮುತ್ತ ನಡೀತಾ ಇರೋದನ್ನ ತಡೆಯೋ ತಾಕತ್ತು ಹೊಂದಿಲ್ಲದೇ ಇರಬಹುದು. ಆದ್ರೆ ನಮ್ಮೊಳಗೆ ನಡೆಯುತ್ತಿರೋದನ್ನು ಕಂಟ್ರೋಲ್ ಮಾಡೋ ತಾಕತ್ತು ನಮಲ್ಲಿ ಇದ್ದೇ ಇರುತ್ತೆ. ಅದು ಯೋಗದ ಮೂಲಕ ಮಾತ್ರ ಸಾಧ್ಯ. ಇದ್ರಿಂದ ಮೈಂಡನ್ನು ಕೂಲ್ ಮಾಡೋಕೆ ಸಾಧ್ಯವಾಗುತ್ತೆ. ಅನಗತ್ಯ ಯೋಚನೆಗಳನ್ನು ತೆಗೆದುಹಾಕಲು ಸಹಕರಿಸುತ್ತೆ ಅಂತ ಬರೆದುಕೊಂಡಿದ್ದಾರೆ. ಯಾವುದನ್ನು ಕಂಟ್ರೋಲ್ ಮಾಡಕ್ಕೆ ಆಗಿಲ್ಲ. ಇವರ ಸುತ್ತಮುತ್ತ ಅಂಥದ್ದು ಏನ್ ನಡೀತಾ ಇತ್ತು ಅಂತ ಇವರು ಸ್ಪಷ್ಟವಾಗಿ ಹೇಳಿಲ್ಲ.. ಅಂದ್ರೆ ರಾಜ್ ಕುಂದ್ರಾ ವ್ಯವಹಾರಗಳು ಗೊತ್ತಿದ್ರೂ ತಡೆಯೋಕೆ ಆಗಿಲ್ಲ ಅನ್ನೋ ಅರ್ಥದಲ್ಲಿ ಈ ಪೋಸ್ಟ್​ ಇದೆ.

-masthmagaa.com

Contact Us for Advertisement

Leave a Reply