ರಷ್ಯಾ-ಚೀನಾ ಭಾಯಿ-ಭಾಯಿ! ಅಮೆರಿಕಗೆ ಮೆಣಸಿನ ಕಾಯಿ!

masthmagaa.com:

ಒಂದ್ಕಡೆ ಅಮೆರಿಕ ಚೀನಾ ಮತ್ತು ರಷ್ಯಾ ಜೊತೆಗೆ ಪೈಪೋಟಿ ಜಾಸ್ತಿ ಮಾಡ್ತಿದ್ರೆ, ಮತ್ತೊಂದ್ಕಡೆ ರಷ್ಯಾ- ಚೀನಾ ಭಾಯಿ ಭಾಯಿ ಆಗ್ತಿವೆ. ಅದೇ ರೀತಿ ಈಗ ಉಭಯದೇಶಗಳ 20 ವರ್ಷಗಳಷ್ಟು ಹಳೆಯ ಒಪ್ಪಂದವೊಂದನ್ನು ಮತ್ತೆ ವಿಸ್ತರಿಸಲು ಗ್ರೀನ್ ಸಿಗ್ನಲ್ ನೀಡಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಡಿಯೋ ಕಾನ್ಫರೆನ್ಸ್ ಮೂಲ ಸಭೆ ನಡೆಸಿದ್ರು. ಈ ವೇಳೆ ಮಾತನಾಡಿದ ಪುಟಿನ್​​, 2001ರಲ್ಲಿ ಚೀನಾ ಮತ್ತು ರಷ್ಯಾ ನಡುವೆ ಆಗಿದ್ದ ಒಪ್ಪಂದ ಉಭಯದೇಶಗಳ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಲು ಸಹಾಯ ಮಾಡ್ತು. ಈಗ ಅದನ್ನ ಮತ್ತೈದು ವರ್ಷಗಳಿಗೆ ವಿಸ್ತರಿಸಲಾಗುತ್ತೆ ಅಂದ್ರು. ಇದೇ ವೇಳೆ ಉಭಯ ನಾಯಕರು ಪರಸ್ಪರ ಹೊಗಳಿಕೊಂಡಿದ್ದಾರೆ. ಇತ್ತೀಚೆಗೆ ಕಮ್ಯೂನಿಸ್ಟ್ ಪಕ್ಷದ 100ನೇ ವರ್ಷಾಚರಣೆ ವೇಳೆ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಸೋವಿಯತ್ ಒಕ್ಕೂಟ ವಿಘಟನೆಗೂ ಮುಂಚೆ ಉಭಯದೇಶಗಳ ನಡುವೆ ಸಂಬಂಧದಲ್ಲಿ ಏರಿಳಿತ ಇತ್ತು. ಆದ್ರೀಗ ರಷ್ಯಾ ಚೀನಾ ಸಂಬಂಧ ವಿಶ್ವಕ್ಕೇ ಮಾದರಿಯಾಗಿವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply