ಅಮೆರಿಕಾ ಪ್ರವಾಸದಿಂದ ಮರಳಿದ ಮೋದಿ ಹೇಳಿದ್ದೇನು..?

ಕಳೆದೈದು ವರ್ಷಗಳಲ್ಲಿ ಭಾರತದ ಗೌರವ ಉತ್ತುಂಗಕ್ಕೇರಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. 7 ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ಸಾದ ಬಳಿಕ ಮಾತನಾಡಿದ ಅವರು, 2014ರಲ್ಲಿ ನಾನು ವಿಶ್ವಸಂಸ್ಥೆಗೆ ಹೋಗಿದ್ದೆ, ಈಗಲೂ ವಿಶ್ವಸಂಸ್ಥೆಗೆ ಹೋಗಿದ್ದೇನೆ. ಈ 5 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ನಾನು ದೊಡ್ಡ ಬದಲಾವಣೆಯನ್ನು ಕಂಡಿದ್ದೇನೆ. ಭಾರತದ ಮೇಲಿನ ಗೌರವ, ಭಾರತದ ಬಗೆಗಿನ ಉತ್ಸಾಹ ಗಮನಾರ್ಹವಾಗಿ ಹೆಚ್ಚಾಗಿದೆ ಅಂದ್ರು. ಅಲ್ಲದೆ ಇದಕ್ಕೆ ಕಾರಣೀಕರ್ತರಾದ 130 ಕೋಟಿ ದೇಶವಾಸಿಗಳಿಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಮೋದಿ ಭಾವುಕರಾದ್ರು. ಜೊತೆಗೆ ಹೌಡಿ ಮೋದಿ ಆಯೋಜಿಸಿದ್ದ ಅನಿವಾಸಿ ಭಾರತೀಯರಿಗೂ ಮೋದಿ ಧನ್ಯವಾದ ಸಮರ್ಪಿಸಿದ್ರು. ಇನ್ನು 2016ರ ಸರ್ಜಿಕಲ್ ಸ್ಟ್ರೈಕ್ ನೆನೆದ ಪ್ರಧಾನಿ ಮೋದಿ, ವಂದಿಸಿದ್ರು.

Contact Us for Advertisement

Leave a Reply