ಬಾಂಗ್ಲಾದಲ್ಲಿ ಹಿಂದೂಗಳ ಪರ ಧ್ವನಿ ಎತ್ತಿದ ಅಮೆರಿಕ

masthmagaa.com:

ಬಾಂಗ್ಲಾದೇಶದಲ್ಲಿ ದಸರಾ ವೇಳೆ ಹಿಂದೂಗಳ ಮೇಲಿನ ದಾಳಿ ಸಂಬಂಧ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಆಯೋಗ ಆತಂಕ ವ್ಯಕ್ತಪಡಿಸಿದೆ. ಈ ಕೂಡಲೇ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಬಾಂಗ್ಲಾದ ಧಾರ್ಮಿಕ ದಾಳಿಕೋರರ ಮೇಲೆ ಕಠಿಣ ಕ್ರಮಗಳನ್ನ ಶುರು ಮಾಡಬೇಕು ಅಂತಲೂ ಈ ಆಯೋಗ ಆಗ್ರಹ ಮಾಡಿದೆ. ಹಾಗೇ ಇದುವರೆಗೂ ಶೇಖ್ ಹಸೀನಾ ಅವ್ರು ಕೈಗೊಂಡ ದಿಟ್ಟ ಕ್ರಮಗಳ ಬಗ್ಗೆ ನಮಗೆ ತೃಪ್ತಿ ಇದೆ ಅಂತಲೂ ಹೇಳಿದೆ. ಯಾಕಂದ್ರೆ ಈ ಘಟನೆಗಳು ಆಗ್ತಿದ್ದ ಹಾಗೆ ಶೇಖ್ ಹಸೀನಾ ಸರ್ಕಾರ ಬಾಂಗ್ಲಾದ ಮೂಲಭೂತವಾದಿಗಳ ಮೇಲೆ ಯುದ್ಧ ಸಾರಿತ್ತು. ಸುಮಾರು 500 ಜನರನ್ನ ಬಂಧಿಸಿ ಜೈಲಿಗೆ ಅಟ್ಟಿದ್ರು. ಶೇಖ್ ಹಸೀನಾರ ಆಡಳಿತ ಪಕ್ಷ ಅವಾಮಿ ಲೀಗ್ ಅಂತೂ ದೇಶವ್ಯಾಪಿ ಬೀದಿಗಿಳಿದು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಪರವಾಗಿ ಮೆರವಣಿಗೆ ಕೂಡ ಮಾಡಿದೆ. ಅಲ್ಲಿ ಅವಾಮಿ ಲೀಗ್ ಪಕ್ಷ ಉದಾರವಾದಿ ಪಕ್ಷ ಅಂತ ಗುರುತಿಸಿಕೊಂಡಿದೆ. ಶೇಖ್ ಹಸೀನಾ ಕೂಡ ಭಾರತದ ಒಳ್ಳೆಯ ಫ್ರೆಂಡ್. ಅವರ ತಂದೆ ಬಂಗಬಂಧು ಶೇಕ್ ಮುಜಿಬುರ್ ರೆಹಮಾನ್ ಗೆ ಬಾಂಗ್ಲಾ ವಿಮೋಚನೆ ವೇಳೆ ಭಾರತ ಮಾಡಿದ ಸಹಾಯವನ್ನ ಅವರು ಮರೆತಿಲ್ಲ. ಆದ್ರೆ ಅಲ್ಲಿನ ಪ್ರತಿಪಕ್ಷ BNP ಬಲಪಂಥೀಯ ಪಕ್ಷ. ಅದರ ನಾಯಕಿ ಬೇಗಂ ಖಲೀದಾ ಜಿಯಾ ಆಧಿಕಾರಕ್ಕೆ ಬಂದಾಗೆಲ್ಲ ಗಡಿಯಲ್ಲಿ ಭಾರತ ವಿರೋಧೀ ಕೆಲಸಗಳಿಗೆ ಸಹಾಯ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply