ಸಮಂತಾಗಾಗಿ ದೇವಸ್ಥಾನ ನಿರ್ಮಿಸಲಿರುವ ಫ್ಯಾನ್‌

masthmagaa.com:

ಚಿತ್ರರಂಗದಲ್ಲಿ ಫೇವರೇಟ್‌ ಹೀರೋ ಹೀರೋಗಳನ್ನ ದೇವರಂತೆ ಆರಾಧಿಸುವ ಅಭಿಮಾನಿಗಳು ಈಗಲೂ ಇದಾರೆ. ಇವರ ಅಭಿಮಾನಕ್ಕೆ ಮಿತಿಯಿಲ್ಲ. ಅವರ ಚಲನಚಿತ್ರಗಳ ಫಸ್ಟ್‌ ಡೇ ಫಸ್ಟ್‌ ಶೋ ನೋಡೋದ್ರಿಂದ ಹಿಡಿದು ಅವರಿಗಾಗಿ ದೇವಾಲಯಗಳನ್ನು ನಿರ್ಮಿಸುವವರೆಗೆ, ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಹೀರೋಯಿನ್‌ಗಳನ್ನ ಇಷ್ಟಪಡ್ತಾರೆ. ಸಮಂತಾ ರುತ್ ಪ್ರಭು ನಾಳೆ (ಏಪ್ರಿಲ್ 28)ಕ್ಕೆ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಲು ರೆಡಿಯಾಗಿದ್ದಾರೆ. ಅವರ ಕಟ್ಟಾ ಅಭಿಮಾನಿಯೊಬ್ಬ ಅವರಿಗೆ ಬೆಸ್ಟ್‌ ಬರ್ತ್‌ ಡೇ ಗಿಫ್ಟ್‌ ಕೊಡಬೇಕು ಅಂತ ಡಿಸೈಡ್‌ ಮಾಡಿದಾನೆ. ಆಂಧ್ರಪ್ರದೇಶದ ಬಪಟ್ಲಾದಲ್ಲಿರುವ ತನ್ನ ಮನೆಯಲ್ಲಿ ಅಭಿಮಾನಿಯೊಬ್ಬ ಸಮಂತಾಗೆ ದೇವಸ್ಥಾನ ಕಟ್ಟೋ ಕೆಲಸದಲ್ಲಿ ಬ್ಯುಸಿ ಆಗಿದ್ದಾನೆ

ಸಮಂತಾ ವಿಗ್ರಹ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ವೈರಲ್ ಆಗ್ತಾ ಇದೆ. ಸಮಂತಾ ಬರ್ತ್‌ಡೇ ದಿನ ಏಪ್ರಿಲ್ 28 ರಂದು ದೇವಾಲಯವನ್ನು ಉದ್ಘಾಟಿಸಲು ಅಭಿಮಾನಿ ಸಂದೀಪ್ ನಿರ್ಧರಿಸಿದ್ದಾರೆ. ಆದರೆ ತನ್ನ ಅಭಿಮಾನಿ ತನಗಾಗಿ ದೇವಸ್ಥಾನ ಕಟ್ಟಿರುವ ಬಗ್ಗೆ ಸಮಂತಾ ಇನ್ನೂ ಪ್ರತಿಕ್ರಿಯಿಸಿಲ್ಲ.

-masthmagaa.com

Contact Us for Advertisement

Leave a Reply