ತೆಲಂಗಾಣ: ಕಿಡ್ನ್ಯಾಪ್ ಸ್ಟೋರಿಯಲ್ಲಿ ಸಿಕ್ತು ಟ್ವಿಸ್ಟ್‌

masthmagaa.com:

ಯುವತಿಯೊಬ್ಬಳನ್ನ ತನ್ನ ತಂದೆಯ ಎದುರೇ 4 ಜನ ಅಪರಿಚಿತರ ಗುಂಪೊಂದು ಕಿಡ್ನ್ಯಾಪ್‌ ಮಾಡಿದ ಘಟನೆ ತೆಲಂಗಾಣದ ರಾಜನ್ನ ಸಿರ್ಸಿಲ ಜಿಲ್ಲೆಯಲ್ಲಿ ನಡೆದಿತ್ತು. ಇದೀಗ ಸ್ಟೋರಿಯಲ್ಲಿ ಟ್ವಿಸ್ಟ್‌ ಸಿಕ್ಕಿದೆ. ಕಿಡ್ನ್ಯಾಪ್‌ ಮಾಡಿದ್ದು ಆಕೆಯ ಬಾಯ್‌ಫ್ರೆಂಡ್‌ ಅಂತ ತಿಳಿದು ಬಂದಿದೆ. ಇದೀಗ ಯುವತಿ ಆಕೆಯ ಬಾಯ್‌ಫ್ರೆಂಡ್‌ ಜೊತೆ ಮದುವೆಯಾಗಿರೋದಾಗಿ ತಿಳಿಸಿದ್ದಾಳೆ. ಆದ್ರೆ ಕಿಡ್ನ್ಯಾಪ್‌ ಆಗೋ ಸಮಯದಲ್ಲಿ ಆರೋಪಿಗಳು ಫೇಸ್‌ ಕವರ್‌ ಮಾಡಿಕೊಂಡಿದ್ರಿಂದ ಯಾರು ಅಂತ ಗೊತ್ತಾಗಿರ್ಲಿಲ್ಲ. ನಂತ್ರ ಕಿಡ್ನ್ಯಾಪ್‌ ಮಾಡಿದ ನಾಲ್ಕು ಜನ ಆರೋಪಿಗಳಲ್ಲಿ ಓರ್ವನನ್ನ ಯುವತಿ ಪ್ರೀತಿಸ್ತಾ ಇದ್ಲು. ಯುವಕ ಬೇರೆ ಜಾತಿಗೆ ಸೇರಿದ್ರಿಂದ ಇವ್ರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ರು. ಈ ಹಿಂದೆ ಆತನ ಜೊತೆ ಯುವತಿ ಓಡಿ ಹೋಗಿದ್ಲು. ಆ ಸಮಯದಲ್ಲಿ ಆಕೆ ಮೈನರ್‌ ಆಗಿದ್ರಿಂದ ಅವನ ಮೇಲೆ ಕೇಸ್‌ ರಿಜಸ್ಟರ್‌ ಆಗಿತ್ತು ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply