ಕೊರೋನಾ ವೈರಸ್: ವೈದ್ಯರ​ ಜೊತೆ ಸಹಕರಿಸದ ವ್ಯಕ್ತಿಗೆ ಜೈಲು ಶಿಕ್ಷೆ

ಕೊರೋನಾ ವೈರಸ್​ ತಗುಲಿದ ವ್ಯಕ್ತಿಯೊಬ್ಬ ಚಿಕಿತ್ಸೆಗೆ ವೈದ್ಯರ ಜೊತೆ ಸಹಕರಿಸದಿದ್ದಕ್ಕೆ ಆತನಿಗೆ 10 ತಿಂಗಳು ಜೈಲು ಶಿಕ್ಷೆ ವಿಧಿಸಿದ ಘಟನೆ ಚೀನಾದ ಶಾನ್​ಡೋಂಗ್​ ಪ್ರಾಂತ್ಯದಲ್ಲಿ ನಡೆದಿದೆ. ಟಿಯಾನ್ ಎಂಬ ವ್ಯಕ್ತಿ ಜನವರಿ 9ರಂದು ಹುಬೈ ಪ್ರಾಂತ್ಯದಿಂದ ಶಾನ್​ಡೋಂಗ್ ಪ್ರಾಂತ್ಯಕ್ಕೆ ಬಂದಿದ್ದ. ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದ ಹುಬೈ ಪ್ರಾಂತ್ಯದಿಂದ ಬಂದಿದ್ದ ಆತನಲ್ಲಿ ಜನವರಿ 20ರಂದು ಜ್ವರ ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯ ಆಡಳಿತಕ್ಕಾಗಲಿ ಅಥವಾ ಆರೋಗ್ಯ ಇಲಾಖೆಗಾಗಲಿ ತಿಳಿಸಿರಲಿಲ್ಲ. ನಂತರ ಆತನನ್ನ ಕೊರೋನಾ ವೈರಸ್ ತಗುಲಿದ ಶಂಕಿತರ ಪಟ್ಟಿಗೆ ಸೇರಿಸಲಾಯ್ತು. ಆದರೂ ವೈದ್ಯರ ಜೊತೆ ಸಹಕರಿಸಲು ಆತ ಒಪ್ಪಲಿಲ್ಲ. ಬಳಿಕ ಆತನಿಗೆ ವೈರಸ್​ ತಗುಲಿರೋದು ದೃಢಪಡುತ್ತಿದ್ದಂತೆ ಆಸ್ಪತ್ರೆಯ ಆ ವಾರ್ಡ್​ನಲ್ಲಿದ್ದ ಇತರರು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 37 ಜನರಿಗೆ ಸೋಂಕು ತಗುಲಿತ್ತು. ಹೀಗಾಗಿ ಅಲ್ಲಿನ ಸ್ಥಳೀಯ ಕೋರ್ಟ್​ ಟಿಯಾನ್​ಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

Contact Us for Advertisement

Leave a Reply