ಮೆಗಾಸ್ಟಾರ್‌ ಚಿರಂಜೀವಿ ಕುಟುಂಬದ ಕುಡಿ ದಾಂಪತ್ಯದಲ್ಲಿ ಬಿರುಕು

masthmagaa.com:

ಟಾಲಿವುಡ್‌ನಲ್ಲಿ ಮತ್ತೊಂದು ಜೋಡಿ ಡಿವೋರ್ಸ್‌ ಕಡೆ ಹೊರಟಿದ್ದಾರೆ ಅನ್ನೊ ಸುದ್ದಿ ಎಲ್ಲಡೆ ವ್ಯಾಪಕವಾಗಿ ಹರಡುತ್ತಿದೆ. ತೆಲುಗಿನ ಮೆಗಾ ಸ್ಟಾರ್‌ ಚಿರಂಜೀವಿ ಅವರ ಸಹೋದರ ನಾಗ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲ ಮತ್ತು ಉದ್ಯಮಿ ಮತ್ತು ಛಾಯಾಗ್ರಾಹಕ ಚೈತನ್ಯ ಚೈತನ್ಯ ಜೊನ್ನಲಗಡ್ಡಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಅನ್ನೊ ವದಂತಿ ಎಲ್ಲಡೆ ಹಬ್ಬುತ್ತಿದೆ. . ಇವರಿಬ್ಬರೂ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಅಲ್ಲದೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿದ್ದ ಮದುವೆ ಪೋಟೊಗಳನ್ನು ಸಹ ಡಿಲೀಟ್‌ ಮಾಡಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಇವರ ಮಧ್ಯೆ ಏನೋ ಸರಿ ಇಲ್ಲ ಅಂತ ಕಾಮೆಂಟ್‌ ಬಾಕ್ಸ್‌ನಲ್ಲಿ ದೊಡ್ಡ ಗದ್ದಲ ಶುರು ಮಾಡಿದ್ದಾರೆ. ಆದರೆ ಈ ವಿಷಯದ ಕುರಿತು ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೈತನ್ಯ ಮತ್ತು ನಿಹಾರಿಕಾ ಅವರ ಡಿವೋರ್ಸ್‌ಗೆ ಅಭಿಮಾನಿಗಳು ಕಳವಳ ವ್ಯಕ್ಯಪಡಿಸ್ತಾ ಇದಾರೆ. ಆಗಸ್ಟ್‌ 20ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಡಿಸೆಂಬರ್ 9, 2020 ರಂದು ಮದುವೆಯಾಗಿದ್ರು. ಅವರ ವಿವಾಹವು ಉದಯ್‌ಪುರದ ಉದಯವಿಲಾಸ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಚಿರಂಜೀವಿ ಸೇರಿದಂತೆ ತೆಲುಗು ಚಿತ್ರರಂಗದವರು ಭಾಗವಹಿಸಿದ್ದರು.

-masthmagaa.com

Contact Us for Advertisement

Leave a Reply