ರಷ್ಯಾ ಗೆದ್ದು ಸೋತ ಆ ಯುದ್ಧ! ಇತಿಹಾಸ ಮರುಕಳಿಸುತ್ತಾ?

masthmagaa.com:

ರಷ್ಯಾ ಯುಕ್ರೇನ್​​ ಯುದ್ಧ ಅಷ್ಟು ಸುಲಭಕ್ಕೆ ತಾರ್ಕಿಕ ಅಂತ್ಯ ಕಾಣೋ ಲಕ್ಷಣ ಕಾಣಿಸ್ತಿಲ್ಲ. ವ್ಲಾಡಿಮಿರ್ ಪುಟಿನ್​ರ ದೊಡ್ಡ ಪಡೆಯನ್ನು ಯುಕ್ರೇನ್​​ ಯಶಸ್ವಿಯಾಗಿ ತಡೆಯುತ್ತಿದೆ. ಹೀಗಾಗಿ ತಜ್ಞರು ಈ ಯುದ್ಧವನ್ನು 80 ದಶಕಗಳ ಹಿಂದೆ ನಡೆದ ಯುದ್ಧಕ್ಕೆ ಹೋಲಿಸ್ತಿದ್ದಾರೆ. ಆಗ ಸೋವಿಯತ್ ಒಕ್ಕೂಟದ ಸರ್ವಾಧಿಕಾರಿಯಾಗಿದ್ದ ಸ್ಟಾಲಿನ್ ಫಿನ್​ಲ್ಯಾಂಡ್ ಮೇಲೆ ಇದೇ ರೀತಿ ದಂಡೆತ್ತಿ ಹೋಗಿದ್ರು. ಆದ್ರೆ ಈ ಯುದ್ಧದಲ್ಲಿ ಫಿನ್​​ಲ್ಯಾಂಡ್​ನ್ನು ಕಬಳಿಸಲು ರಷ್ಯಾ ಕೈಲಿ ಆಗಿರಲಿಲ್ಲ. ಕೊನೆಗೆ ಅನಿವಾರ್ಯವಾಗಿ ರಷ್ಯಾ ಫಿನ್​ಲ್ಯಾಂಡ್​​ ಜೊತೆ ಒಪ್ಪಂದಕ್ಕೆ ಮುಂದಾಗಿತ್ತು. ಯೆಸ್​ ಅದೇ ವಿಂಟರ್​ವಾರ್​.. 2ನೇ ವಿಶ್ವಯುದ್ಧ ಮುಗಿದ 3 ತಿಂಗಳ ನಂತರ ಈ ಯುದ್ಧ ಶುರುವಾಯ್ತು. ರಷ್ಯಾದ ಬೃಹತ್ ಸೇನೆ ಫಿನ್​ಲ್ಯಾಂಡ್ ಮೇಲೆ ಮುಗಿಬಿತ್ತು. ಒಂದು ಮಿಲಿಯನ್​ ಅಂದ್ರೆ 10 ಲಕ್ಷದಷ್ಟು ಸೋವಿಯತ್ ಒಕ್ಕೂಟದ ಸೈನಿಕರು ಈ ಯುದ್ಧದಲ್ಲಿ ಭಾಗಿಯಾಗಿದ್ರು. ಸುಲಭವಾಗಿ ಫಿನ್​ಲ್ಯಾಂಡ್​​ನ್ನು ಸೋಲಿಸಬಹುದು. ಅದನ್ನು ಕಂಟ್ರೋಲ್​ಗೆ ತಗೊಳ್ಬೋದು ಅನ್ನೋದು ಸ್ಟಾಲಿನ್ ಯೋಚನೆಯಾಗಿತ್ತು. ಆದ್ರೆ ಫಿನ್​ಲ್ಯಾಂಡ್ ಬಹಳ ಬುದ್ಧಿವಂತಿಕೆಯನ್ನು ಉಪಯೋಗಿಸಿ, ರಷ್ಯಾ ಸೇನೆಗೆ ದೊಡ್ಡಮಟ್ಟದ ಹಾನಿಯನ್ನು ಮಾಡುವಲ್ಲಿ ಯಶಸ್ವಿಯಾಯ್ತು. ಈ ಯುದ್ಧ ಬರೋಬ್ಬರಿ ಮೂರು ತಿಂಗಳ ಕಾಲ ನಡೀತು. ರಷ್ಯಾ ಅಂದ್ರೆ ಸೋವಿಯತ್ ಒಕ್ಕೂಟದ 1.26 ಲಕ್ಷ ಸೈನಿಕರು ಈ ಯುದ್ಧಕ್ಕೆ ಬಲಿಯಾದ್ರು. ಒಂದೂವರೆ ಲಕ್ಷಕ್ಕೂ ಹೆಚ್ಚು ಸೈನಿಕರು ಗಾಯಗೊಂಡ್ರು. ಮೂರೂವರೆ ಸಾವಿರ ಟ್ಯಾಂಕ್​ಗಳು ಮತ್ತು 500 ಏರ್​ಕ್ರಾಫ್ಟ್​​ಗಳನ್ನು ರಷ್ಯಾ ಕಳ್ಕೊಳ್ತು. ಅದೇ ಫಿನ್​ಲ್ಯಾಂಡ್ ಕಡೆಯಿಂದ ಯುದ್ಧದಲ್ಲಿ ಭಾಗಿಯಾಗಿದ್ದೇ 3 ಲಕ್ಷ ಸೈನಿಕರು.. ಅವರಲ್ಲಿ 26 ಸಾವಿರ ಸೈನಿಕರು ಪ್ರಾಣ ಬಿಟ್ರು. ಅಂತಿಮವಾಗಿ ಮಾಸ್ಕೋ ಶಾಂತಿ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ವು. ಫಿನ್​ಲ್ಯಾಂಡ್ ತನ್ನ ಗಡಿಯ ಸ್ವಲ್ಪ ಭಾಗವನ್ನು ರಷ್ಯಾಗೆ ಬಿಟ್ಟುಕೊಡ್ತು. ರಷ್ಯಾ ತಕ್ಕಮಟ್ಟಿಗೆ ಗೆದ್ದರೂ ಅಪಾರ ಪ್ರಮಾಣದ ಬೆಲೆ ತೆರಬೇಕಾಗಿತ್ತು. ಈಗ ಯುಕ್ರೇನ್​ನಲ್ಲೂ ರಷ್ಯಾ ಅದೇ ರೀತಿಯ ದೊಡ್ಡ ನಷ್ಟ ಅನುಭವಿಸುತ್ತೆ ಅಂತಿದ್ದಾರೆ ಅಂತಾರಾಷ್ಟ್ರೀಯ ಯುದ್ಧ ತಜ್ಞರು.

-masthmagaa.com

Contact Us for Advertisement

Leave a Reply