ಬಾಲಿವುಡ್ ಗೆ ಅಮೀರ್ ಖಾನ್ ಮಗನ್ ಭರ್ಜರಿ ಎಂಟ್ರಿ!

masthmagaa.com:

ಬಾಲಿವುಡ್‌ನಲ್ಲಿ ನೆಪೋಟಿಸಂ ಬಗ್ಗೆ ಇತ್ತೇಚೆಗೆ ಸಾಕಷ್ಟು ವಿವಾದಗಳು ಕೇಳಿಬರುತ್ತೀವೆ. ಸೋಷಿಯಲ್‌ ಮೀಡಿಯಾಗಳಲ್ಲೂ ಕೂಡ ಯಾವಾಗಲು ನೆಪೋಟಿಸಂ ಬಗ್ಗೆಯೆ ಚರ್ಚೆ. ಸ್ಟಾರ್‌ ನಟರ ಮಕ್ಕಳು ಈ ಕುರಿತಾಗಿ ಬಹಳಷ್ಟು ಟ್ರೋಲ್‌ ಆಗುತ್ತಿರುತ್ತಾರೆ. ಇದೆಲ್ಲಾ ತುಂಬಾ ಕಾಮನ್‌ ಆಗಿಹೋಗಿದೆ. ಸುಶಾಂತ ಸಿಂಗ್‌ ರಜಪೂತ್‌ ಅವರು ತೀರಿಹೋದ ನಂತರ ನೆಪೋಟಿಸಂ ಬಗ್ಗೆ ಇನ್ನೂ ಜಾಸ್ತಿ ಕಾಂಟ್ರಾವರ್ಸಿ ಆಗುತ್ತಿವೆ. ತುಂಬಾ ಬಾಲಿವುಡ್‌ ಸೆಲಿಬ್ರಿಟಿಸ್‌ ಇದರ ಕುರಿತಾಗಿ ಕಮೆಂಟ್‌ ಕೂಡ ಮಾಡಿದ್ದಾರೆ. ಈಗ ಮ‌ತ್ತೊಬ್ಬ ನೆಪೋಕಿಡ್‌ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್‌ನ ಖ್ಯಾತ ನಟ ಅಮೀರ್‌ ಖಾನ್‌ ಅವರ ಮಗ ಜುನೈದ್ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸೌತ್‌ನ ಸೂಪರ್‌ಹಿಟ್‌ ಫಿಲಂ ಒಂದು ಹಿಂದಿಯಲ್ಲಿ ಡಬ್‌ ಆಗುತ್ತಿದೆ, ಈ ಸಿನಿಮಾಗೆ ಜುನೈದ್ ಖಾನ್ ರುಜುಹಾಕಿದ್ದಾರೆ. ತಮಿಳು ಚಿತ್ರ ʻಲವ್‌ ಟುಡೇʼ ಹಿಂದಿಗೆ ಡಬ್‌ ಮಾಡಲಾಗುತ್ತಿದ್ದು, ಜುನೈದ್ ಖಾನ್ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 2022 ರಲ್ಲಿ ರಿಲೀಸ್‌ ಆದ ʻಲವ್‌ ಟುಡೇʼ ಸಿನಿಮಾ ಐದು ಕೋಟಿ ಬಜೇಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್‌ ಆಫೀಸ್‌ನಲ್ಲಿ 150 ಕೋಟಿ ಗಳಿಸಿತ್ತು. ಈ ಸಿನಿಮಾದಲ್ಲಿ ಪ್ರದೀಪ್‌ ರಂಗನಾಥನ್‌ ನಟಿಸಿ ನಿರ್ದೇಶನ ಕೂಡ ಅವರೆ ಮಾಡಿದ್ದರು.

ಜುನೈದ್ ಖಾನ್ ಅವರು ಅಮೆರಿಕಾ ಅಕಾಡೆಮಿಯ ಡ್ರಾಮೆಟಿಕ್‌ ಆರ್ಟ್ಸ್‌ ಲಾಸ್‌ ಆಂಜ್‌ಲೆಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಈ ಹಿಂದೆ ಇವರು ಅಮೀರ್‌ ಖಾನ್‌ ನಿರ್ಮಾಣದ ʻಪ್ರಿತಮ್‌ ಪ್ಯಾರೆʼ ವೆಬ್‌ ಸಿರೀಸ್‌ನಲ್ಲಿ ಅಭಿನಯಿಸಿದ್ದರು. ಯಶ್‌ರಾಜ್‌ ಬ್ಯಾನರ್ಸ್‌ ಅಡಿಯಲ್ಲಿ ನಿರ್ಮಾಣವಾದ ಜುನೈದ್ ಖಾನ್ ಅವರ ʻಮಹಾರಾಜ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

-masthmagaa.com

Contact Us for Advertisement

Leave a Reply