ಪಾಕ್‌ ಮಾಜಿ ಪಿಎಂ ಇಮ್ರಾನ್‌ ಖಾನ್‌ರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ PTI ಪಕ್ಷ!

masthmagaa.com:

ತೋಷಖಾನ ಕೇಸ್‌ನಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌ ಆಗಿದಾರೆ. ಅರೆಸ್ಟ್‌ಗೂ ಮುನ್ನ ರೆಕಾರ್ಡ್‌ ಮಾಡಲಾದ ವಿಡಿಯೋ ಒಂದನ್ನ ಸೋಷಿಯಲ್‌ ಮಿಡಿಯಾದಲ್ಲಿ ಇಮ್ರಾನ್ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ, ʻನನ್ನ ಬಂಧನವನ್ನ ನಾನು ಮೊದಲೇ ನಿರೀಕ್ಷಿಸಿದ್ದೆ. ಈಗ ವಿಡಿಯೋ ರೆಕಾರ್ಡ್‌ ಮಾಡಿದ್ದೇನೆ. ಯಾಕಂದ್ರೆ ನನ್ನ ಪಕ್ಷದ ಕಾರ್ಯಕರ್ತರು ಶಾಂತಿ, ಸ್ಥಿರ ಮತ್ತು ಸ್ಟ್ರಾಂಗ್‌ ಆಗಿ ಇರ್ಬೇಕು ಅಂತ ನಾನು ಬಯಸುತ್ತೇನೆ ಎಂದು ಖಾನ್‌ ಹೇಳಿದ್ದಾರೆ. ಆದ್ರೆ ಖಾನ್‌ ಅವರ ಶಾಂತಿ ಸಂದೇಶಕ್ಕೆ ಅವರ ಬೆಂಬಲಿಗರು ಕೇರ್‌ ಮಾಡಿಲ್ಲ. ಖಾನ್‌ರ ಬಂಧನವನ್ನ ವಿರೋಧಿಸಿ ಅವ್ರ ಬೆಂಬಲಿಗರು ಹಾಗೂ PTI ನ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ತೊಡಗಿದ್ದ ಕನಿಷ್ಠ 19 PTI ಕಾರ್ಯಕರ್ತರು ಹಾಗೂ ಖಾನ್‌ರ ಬೆಂಬಲಿಗರನ್ನ ವಶಕ್ಕೆ ಪಡೆಯಲಾಗಿದೆ ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ. ಇತ್ತ ಇಮ್ರಾನ್‌ರ ಬಂಧನವನ್ನ ವಿರೋಧಿಸಿ ಅವರ ಪಕ್ಷ PTI, ಬಂದೂಕು ತೋರಿಸಿ ಇಮ್ರಾನ್‌ ಅವ್ರನ್ನ ಅಪಹರಿಸಲಾಗಿದೆ ಅಂತ ಅರೋಪಿಸಿ ಲಾಹೋರ್‌ ಹೈಕೋರ್ಟಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯಲ್ಲಿ ಸರ್ಕಾರ ಖಾನ್‌ರನ್ನ ಅಕ್ರಮ ಬಂಧನದಲ್ಲಿ ಇರಿಸಿದೆ. ಇಮ್ರಾನ್‌ ಅವ್ರು ಜಮಾನ್ ಪಾರ್ಕ್ ನಿವಾಸದಲ್ಲಿದ್ದಾಗ ಸುಮಾರು 200 ಪೊಲೀಸರು ಮನೆಗೆ ನುಗ್ಗಿ, ಬಂದೂಕು ತೋರಿಸಿ ಅವ್ರನ್ನ ಕಿಡ್ನ್ಯಾಪ್‌ ಮಾಡಿದ್ದಾರೆ. ಈಗ ಅಕ್ರಮ ಬಂಧನದಲ್ಲಿರಿಸಲಾಗಿದೆ. ಹೀಗಾಗಿ ಕೂಡಲೇ ಖಾನ್‌ರನ್ನ ಕೋರ್ಟ್‌ ಮುಂದೆ ಹಾಜರು ಪಡಿಸುವಂತೆ ಆದೇಶ ನೀಡ್ಬೇಕು ಅಂತ ಮನವಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply