ಅಭಿನಂದನ್ ವರ್ಧಮಾನ್ ಸೇರಿ ಹಲವು ಯೋಧರಿಗೆ ಪ್ರಶಸ್ತಿ

masthmagaa.com:

ದೆಹಲಿ: ಗಡಿಯಲ್ಲಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್​​​ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇವತ್ತು ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಿದ್ರು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್ ಏರ್​ಸ್ಟ್ರೈಕ್ ನಡೆಸಿತ್ತು. ಇದ್ರ ಮರುದಿನವೇ ಅಂದ್ರೆ 2019ರ ಫೆಬ್ರುವರಿ 27ರಂದು ಗಡಿಯತ್ತ ಎಫ್ 16 ಯುದ್ಧ ವಿಮಾನ ಹಿಡ್ಕೊಂಡು ಬಂದಿತ್ತು ಪಾಕಿ ಪಡೆ. ಈ ವೇಳೆ ಮಿಗ್ 21 ಏರಿ ಹೊರಟಿದ್ದ ಅಭಿನಂದನ್ ವರ್ಧಮಾನ್​ ಅದನ್ನು ಹೊಡೆದುರುಳಿಸಿದ್ರು. ಈ ವೇಳೆ ಅಭಿನಂದನ್ ವರ್ಧಮಾನ್ ವಿಮಾನಕ್ಕೂ ಹಾನಿಯಾಗಿ, ಪಾಕ್ ಗಡಿಯೊಳಗೆ ಇಳಿದಿದ್ರು. ಪಾಕಿಗಳ ಕೈಗೆ ಸೆರೆಸಿಕ್ಕಿದ್ದ ಅವರನ್ನು ಒಂದೇ ದಿನದಲ್ಲಿ ಭಾರತಕ್ಕೆ ಕರೆತರಲಾಗಿತ್ತು. ಇನ್ನು ಇವರ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಪ್ರಕಾಶ್ ಜಾಧವ್​​ಗೆ ಮರಣೋತ್ತರ ಕೀರ್ತಿ ಚಕ್ರ, ಮೇಜರ್ ವಿಭೂತಿ ಶಂಕರತ್ ಧೌಂಡಿಯಾಲ್​​ ಮತ್ತು ನೈಬ್ ಸುಬೇದಾರ್ ಸೋಮ್​ಬೀರ್​​​ ಮರಣೋತ್ತರ ಶೌರ್ಯ ಚಕ್ರ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಗಿದೆ.

-masthmagaa.com

Contact Us for Advertisement

Leave a Reply