ಮಣಿಪುರದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ವಿಫಲವಾಗಿದೆ: ಕಿಡಿಕಾರಿದ ಸುಪ್ರೀಂಕೋರ್ಟ್‌

masthmagaa.com:

ಮಣಿಪುರ ಹಿಂಸಾಚಾರ ಕೇಸ್‌ನ ವಿಚಾರಣೆಯನ್ನ ಸುಪ್ರೀಂಕೋರ್ಟ್‌ ಇವತ್ತೂ ಮುಂದುವರೆಸಿದೆ. ಬೆತ್ತಲೆ ಮೆರವಣಿಗೆಗೆ ಒಳಗಾಗಿದ್ದ ಇಬ್ಬರು ಮಹಿಳೆಯರ ಹೇಳಿಕೆಯನ್ನ ಸದ್ಯಕ್ಕೆ ತೆಗೆದುಕೊಳ್ಳದಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಇತ್ತ ಬೆತ್ತಲೆ ಮೆರವಣಿಗೆ ಕೇಸ್‌ಗೆ ಸಂಬಂಧಿಸಿಸದಂತೆ ಈಗಾಗಲೇ ಮಣಿಪುರ ಪೊಲೀಸರು 7 ಜನ ಆರೋಪಿಗಳನ್ನ ಅರೆಸ್ಟ್‌ ಮಾಡಿದ್ದಾರೆ. ಮೇ 3 ರಂದು ಉಂಟಾಗಿದ್ದ ಹಿಂಚಾರದ ನಂತ್ರ ಮಣಿಪುರ ಸರ್ಕಾರ ಇಲ್ಲಿಯವರೆಗೆ 6,523 FIRಗಳನ್ನ ದಾಖಲಿಸಿದೆ ಅಂತ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರ್ಟ್‌ಗೆ ತಿಳಿಸಿದ್ದಾರೆ. ಈ ಕಡೆ ಮಹಿಳೆಯರ ಮೆರವಣಿಗೆ ಕೇಸ್‌ ಕುರಿತು ಪೊಲೀಸರಿಗೆ ಛೀಮಾರಿ ಹಾಕಿರೋ ಸುಫ್ರೀಂ, ಮೆರವಣಿಗೆ ವಿಡಿಯೋಗೆ ಸಂಬಂಧಿಸಿದಂತೆ FIRನ್ನ ಲೇಟ್‌ ಆಗಿ ಹಾಕಲಾಗಿದೆ. ಈ ಕೇಸ್‌ಗಳನ್ನ ತನಿಖೆ ನಡೆಸಲು ಮಣಿಪುರ ಪೊಲೀಸರು ಅಸಮರ್ಥರ ರೀತಿ ಕಾಣ್ತಿದ್ದಾರೆ. ಈಗಾಗಲೇ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಈ ರೀತಿ ಲಾ ಅಂಡ್‌ ಆರ್ಡರ್‌ ಕಾಪಾಡಬೇಕಾದ ವ್ಯವಸ್ಥೆಯೇ ಜನರನ್ನ ಪ್ರೊಟೆಕ್ಟ್‌ ಮಾಡಿಲ್ಲ ಅಂದ್ರೆ ಸುರಕ್ಷತೆಗಾಗಿ ಎಲ್ಲಿಗೆ ಹೋಗ್ಬೇಕು ಅಂತ ಸಿಜೆಐ ಡಿ.ವೈ ಚಂದ್ರಚೂಡ್‌ ಕಿಡಿಕಾರಿದ್ದಾರೆ. ಜೊತೆಗೆ ಒಂದೆರಡು FIRಗೆ ಸಂಬಂಧಿಸಿದನ್ನ ಬಿಟ್ರೆ ಇನ್ಯಾವುದೇ ಬಂಧನಗಳು ಸಹ ಆಗಿಲ್ಲ. ಇದ್ನೆಲ್ಲಾ ನೋಡಿದ್ರೆ ತನಿಖೆ ಎಷ್ಟು ಜಡವಾಗಿದೆ, ನಿಧಾನಗತಿಯಲ್ಲಿದೆ ಅನ್ನೋದು ಗೊತ್ತಾಗ್ತಿದೆ. ಜೊತೆಗೆ ಕಳೆದ 2 ತಿಂಗಳಲ್ಲಿ ಮಣಿಪುರದಲ್ಲಿ ಸಂವಿಧಾನಾತ್ಮಕ ವ್ಯವಸ್ಥೆ ಅಂದ್ರೆ ಸರ್ಕಾರ ಕಂಪ್ಲೀಟ್‌ ಆಗಿ ವಿಫಲವಾಗಿದೆ ಅಂತ ಸಿಜೆಐ ಟೀಕಿಸಿದ್ದಾರೆ. ಜೊತೆಗೆ ಮುಂದಿನ ವಿಚಾರಣೆಯನ್ನು ಆಗಸ್ಟ್ 7 ರಂದು ನಿಗದಿಪಡಿಸಿದ್ದು, ಮಧ್ಯಾಹ್ನ 2 ಗಂಟೆಗೆ ಮಣಿಪುರದ ಡಿಜಿಪಿ ನ್ಯಾಯಾಲಯದ ಮುಂದೆ ಹಾಜರಾಗಿ ಸಂಪೂರ್ಣ ವಿವರ ನೀಡಬೇಕು ಅಂತ ಸುಪ್ರೀಂಕೋರ್ಟ್‌ ಪೊಲೀಸರಿಗೆ ಸಮನ್ಸ್‌ ನೀಡಿದೆ.

ಇನ್ನೊಂದ್‌ ಕಡೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಧ್ಯಂತರ ಶಿಫಾರಸುಗಳನ್ನ ಕಳುಹಿಸಿದ್ದಾರೆ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು, ಸಿಎಂ ರಾಜೀನಾಮೆ, ಪ್ರಧಾನಿ ಮತ್ತು ಕೇಂದ್ರ ಸಚಿವರ ತುರ್ತು ಭೇಟಿ ಸೇರಿ ಸಮಗ್ರ ಕಾರ್ಯತಂತ್ರಕ್ಕೆ ಸಂಬಂಧಪಟ್ಟಂತೆ 24 ಮಧ್ಯಂತರ ಶಿಫಾರಸುಗಳನ್ನ ರಾಷ್ಟ್ರಪತಿಗಳಿಗೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply