ಅಬುಧಾಬಿಯ ಚೊಚ್ಚಲ ಹಿಂದೂ ಮಂದಿರ ಮೋದಿಯಿಂದ ಉದ್ಘಾಟನೆ!

masthmagaa.com:

ಯುಎಇ ನ ಮೊಟ್ಟಮೊದಲ ಹಿಂದೂ ದೇವಸ್ಥಾನ ʻಬಾಪ್ಸ್‌ ಸ್ವಾಮಿನಾರಾಯಣ ಮಂದಿರʼ ನಿರ್ಮಾಣವಾಗಿದ್ದು, ಫೆಬ್ರುವರಿ 14 ರಂದು ಇದ್ರ ಉದ್ಘಾಟನೆ ನಡೆಯಲಿದೆ. ಈ ಉದ್ಘಾಟನೆಯನ್ನ ಪಿಎಂ ನರೇಂದ್ರ ಮೋದಿಯವ್ರು ನೆರವೇರಿಸಲಿದ್ದಾರೆ. ಇನ್ನು ಈ ನೂತನ ಹಿಂದೂ ದೇವಾಲಯ ಮುಂಬರೋ ಮಾರ್ಚ್‌ 1 ರಂದು ಸಾರ್ವಜನಿಕರಿಗೆ ತೆರೆದ್ಕೊಳ್ಳಲಿದೆ. ಅಂದ್ಹಾಗೆ ಈ ಬಾಪ್ಸ್‌ ಸ್ವಾಮಿನಾರಾಯಣ ಮಂದಿರ ಅಥ್ವಾ ಬೋಚಾನ್ವಾಸಿ ಅಕ್ಷರ್‌ ಪುರುಷೋತ್ತಮ್‌ ಸ್ವಾಮಿನಾರಾಯಣ ಮಂದಿರ ಅಲ್ಲಿನ ಅಬುಧಾಬಿನಲ್ಲಿ ನಿರ್ಮಾಣವಾಗಿದೆ. ಇದು ಸುಮಾರು 27 ಎಕ್ರೆ ಜಾಗದಲ್ಲಿ ನಿರ್ಮಾಣಗೊಂಡಿದ್ದು, ಇದ್ರ ಪ್ರಾರ್ಥನಾ ಮಂದಿರದಲ್ಲಿ ಒಂದೇ ಸಮನೆ 3 ಸಾವಿರ ಜನರು ಸೇರ್ಬೋದು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply