ನಿರ್ಬಂಧನೆ ಹೇರೊದ್ರಿಂದ ಗರ್ಭಪಾತಗಳ ಸಂಖ್ಯೆ ಕಡಿಮೆ ಆಗಲ್ಲ: WHO ಮುಖ್ಯಸ್ಥ

masthmagaa.com:

ಅಮೆರಿಕಾದಲ್ಲಿ ಭಾರಿ ಚರ್ಚೆಗೆ ಒಳಪಟ್ಟ ಅಬಾರ್ಷನ್‌ ವಿಚಾರವಾಗಿ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ಮಾತನಾಡಿದ್ದಾರೆ. ಅಬಾರ್ಷನ್‌ ಮೇಲೆ ನಿರ್ಬಂಧನೆ ಹೇರೊದ್ರಿಂದ, ಅವುಗಳ ಸಂಖ್ಯೆಗಳೇನು ಕಡಿಮೆ ಆಗಲ್ಲ. ಇದ್ರಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅಸುರಕ್ಷಿತ ಮಾರ್ಗಗಳಿಗೆ ಮುಂದಾಗ್ತಾರೆ ಅಂತ ಎಚ್ಚರಿಸಿದ್ದಾರೆ. ಜೊತೆಗೆ ಸುರಕ್ಷಿತ ಗರ್ಭಪಾತ ಜೀವಗಳನ್ನ ಉಳಿಸುತ್ತೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಇದೆ ವಿಚಾರವಾಗಿ ಗರ್ಭಪಾತ ವಿರೋಧಿ ಪ್ರತಿಭಟನೆಕಾರ ಒಬ್ಬ ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೇ 1000 ಅಡಿ ಕಟ್ಟಡವನ್ನ ಏರಿ ಪ್ರತಿಭಟನೆ ನಡೆಸಿದ್ದಾನೆ. ಸ್ಯಾನ್‌ಫ್ರಾನ್ಸಿಸ್ಕೊದ ಸೇಲ್ಸ್‌ಫೋರ್ಸ್‌ ಟವರ್‌ ಏರಿರೋ ಈತನ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಈತನನ್ನ ಮೈಸನ್‌ ಡೆಸ್‌ಚಾಂಪ್ಸ್‌ ಅಂತ ಗುರುತಿಸಲಾಗಿದ್ದು, ಈ ಹುಚ್ಚು ಸಾಧನೆಯ ನಂತ್ರ ಬಂಧಿಸಲಾಗಿದೆ.

-masthmagaa.com

Contact Us for Advertisement

Leave a Reply