ಹಿಂದೂ ಶಾಸ್ತ್ರದ ಪ್ರಕಾರ ಮದುವೆ ಆಗ್ತಿರೋ “ಸ್ವರಾ ಭಾಸ್ಕರ್‌”

masthmagaa.com:

ಹೌದು, ಸ್ವರಾ ಭಾಸ್ಕರ್‌ ಅವರು ಹಿಂದೂ ಸಂಪ್ರದಾಯ ಪ್ರಕಾರ ಮದುವೆ ಆಗ್ತಾ ಇದಾರೆ. ಶಾಸ್ತ್ರದ ಪ್ರಕಾರದಂತೆ ಇವತ್ತು ಅರಿಶಿಣ ಶಾಸ್ತ್ರ ಮಾಡಿಕೊಂಡಿದ್ದಾರೆ. ಜೊತೆಗೆ ಅದರ ಫೊಟೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ.
ಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಜೊತೆ ರಿಜಿಸ್ಟರ್ ಮದುವೆಯಾಗುವ ಮೂಲಕ ನಟಿ ಸ್ವರಾ ಭಾಸ್ಕರ್ ಅಚ್ಚರಿ ಮೂಡಿಸಿದ್ದರು. ಈ ಸರಳ ಮದುವೆ ಸ್ವರಾ ಅವರ ತಂದೆ- ತಾಯಿ ಕುಟುಂಬಸ್ಥರಿಗೆ ಇಷ್ಟವಾಗಿಲ್ಲ. ಇದೀಗ ಅವರ ಆಸೆಯಂತೆಯೇ ನಟಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ. ಸ್ವರಾ ಕುಟುಂಬದವರ ಆಸೆಯಂತೆ ಫಹಾದ್ ಜೊತೆ ಹಿಂದೂ ಸಂಪ್ರದಾಯದಂತೆ ನಟಿ ಮದುವೆಯಾಗುತ್ತಿದ್ದಾರೆ. ಸದ್ಯ ಸಂಗೀತ, ಹಳದಿ ಶಾಸ್ತ್ರದ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ಸ್ವರಾ ಮತ್ತು ಫಹಾದ್ ಮಾರ್ಚ್ 16ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ

-masthmagaa.com

Contact Us for Advertisement

Leave a Reply