ರಾಜಕೀಯಕ್ಕೆ ಸೋನುಸೂದ್ ಸಹೋದರಿ! ಪಕ್ಷದ ಹೆಸರಲ್ಲಿ ಸಸ್ಪೆನ್ಸ್ ಇಟ್ಟ ನಟ

masthmagaa.com:

ನಟ ಸೋನು ಸೂದ್​ ಸಹೋದರಿ ಮಾಳವಿಕಾ ಸೂದ್​ ಚುನಾವಣೆಗೆ ಕಂಟೆಸ್ಟ್ ಮಾಡಲಿದ್ದಾರೆ. ಮುಂದಿನ ವರ್ಷ ನಡೆಯಲಿರೋ ಪಂಜಾಬ್ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕಲಿದ್ದಾರೆ. ಈ ಬಗ್ಗೆ ಇವತ್ತು ನಟ ಸೋನು ಸೂದ್ ಅನೌನ್ಸ್ ಮಾಡಿದ್ದಾರೆ. ಆದ್ರೆ ಯಾವ ಪಕ್ಷದಿಂದ ಕಣಕ್ಕೆ ಇಳೀತಾರೆ ಅನ್ನೋದನ್ನು ಬಹಿರಂಗಪಡಿಸಿಲ್ಲ. ಸೋನು ಸೂದ್ ಇತ್ತೀಚೆಗಷ್ಟೇ ಪಂಜಾಬ್ ಸಿಎಂ ಚರಣ್​ಜೀತ್ ಸಿಂಗ್ ಚನ್ನಿಯನ್ನು ಭೇಟಿಯಾಗಿದ್ರು. ಇದಕ್ಕೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ರನ್ನೂ ಭೇಟಿಯಾಗಿದ್ರು. ಅಂದಹಾಗೆ ಕೊರೋನಾ ಬಂದು ಲಾಕ್​​ಡೌನ್ ಆಗಿದ್ದ ಸಂದರ್ಭದಲ್ಲಿ ಸೋನುಸೂದ್​ ಬಡಜನರ ಸಹಾಯಕ್ಕೆ ಮುಂದೆ ಬಂದು, ರಿಯಲ್ ಹೀರೋ ಅಂತ ಕರೆಸಿಕೊಂಡಿದ್ರು. ಈ ನಡುವೆ ಪಂಜಾಬ್ ಬಿಜೆಪಿ ನಾಯಕರು ಇವತ್ತು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply