ರಾಗಿಣಿ, ಸಂಜನಾ ಬಳಿಕ ಇದೀಗ ಐಂದ್ರಿತಾ, ದಿಗಂತ್​ಗೆ ನೋಟಿಸ್..!

masthmagaa.com:

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅರೆಸ್ಟ್ ಆಗಿರೋ ಬೆನ್ನಲ್ಲೇ ಕನ್ನಡದ ಮತ್ತೊಬ್ಬ ನಟಿಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದಾರೆ. ನಟಿ ಐಂದ್ರಿತಾ ರೇ ಮತ್ತು ಅವರ ಪತಿ ದಿಗಂತ್​ಗೆ ಸಿಸಿಬಿ ನೋಟಿಸ್ ನೀಡಿದೆ. ನೋಟಿಸ್​ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ (NCB) ನೀಡಿದ ಸುಳಿವಿನ ಆಧಾರದಲ್ಲಿ ಸಿಸಿಬಿ ಅಧಿಕಾರಿಗಳು ಐಂದ್ರಿತಾಗೆ ನೋಟಿಸ್ ನೀಡಿದ್ದಾರೆ ಎನ್ನಲಾಗ್ತಿದೆ. ಐಂದ್ರಿತಾ ರೇ ಕಳೆದ ವರ್ಷ ಶ್ರೀಲಂಕಾ ರಾಜಧಾನಿ ಕೊಲಂಬೋದ ಕ್ಯಾಸಿನೋವೊಂದರಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಗೆ ಬರುವಂತೆ ಶೇಖ್ ಫಾಝಿಲ್ ಆಹ್ವಾನ ನೀಡಿದ್ದ. ಇದನ್ನು ಸ್ವತಃ ಐಂದ್ರಿತಾ ರೇ ಸೆಲ್ಫಿ ವಿಡಿಯೋ ಮಾಡಿ ಹೇಳಿಕೊಂಡಿದ್ದರು. ಜೊತೆಗೆ ಬೇರೆಯವರನ್ನು ಕೂಡ ಪಾರ್ಟಿಗೆ ಬರುವಂತೆ ಆಹ್ವಾನಿಸಿದ್ದರು. ಇದೇ ಈಗ ಐಂದ್ರಿತಾಗೆ ಸಂಕಷ್ಟ ತಂದಂತೆ ಕಾಣುತ್ತಿದೆ.

ಡ್ರಗ್ಸ್​ ಪ್ರಕರಣದಲ್ಲಿ ‘ಈ ವಾರ ಮಹತ್ವದ್ದು’ ಅಂತ ಇತ್ತೀಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಐಂದ್ರಿತಾ ರೇ ಮತ್ತು ದಿಗಂತ್​ಗೆ ಸಿಸಿಬಿ ನೋಟಿಸ್ ನೀಡಿರುವುದು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply