ನಾನು ಪ್ರಗ್ನೆಂಟ್‌ ಎಂದ ನಟಿ ಇಲಿಯಾನ : ಅಪ್ಪ ಯಾರು ಎಂದ ನೆಟ್ಟಿಗರು!

masthmagaa.com:

ಬಹುಭಾಷಾ ನಟಿ ಇಲಿಯಾನ ಡಿಕ್ರೂಜ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾನು ಪ್ರಗ್ನೆಂಟ್‌ ಆಗಿರೋದಾಗಿ ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅನೌನ್ಸ್‌ ಮಾಡಿದ್ದಾರೆ.

‘ಆಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್‌” ಎನ್ನುವ ಬರಹ ಇರುವ ಟೀ-ಶರ್ಟ್‌ ಮತ್ತು ‘ಮಾಮಾ’ ಪೆಂಡೆಂಟ್‌ ಇರುವ ಫೋಟೊಗಳನ್ನ ಶೇರ್‌ ಮಾಡುವ ಮೂಲಕ “ಶೀಘ್ರದಲ್ಲೇ ನನ್ನ ಪುಟ್ಟ ಡಾರ್ಲಿಂಗ್‌ ಬರಲಿದೆ. ನಿನ್ನನ್ನು ಭೇಟಿಯಾಗಲು ಕಾತುರದಲ್ಲಿದ್ದೇನೆ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇಲಿಯಾನಾ ಅವರ ತಾಯಿ ಸಮಿರಾ ಡಿಕ್ರೂಜ್ ಈ ಪೋಸ್ಟ್‌ಗೆ ” ಶೀಘ್ರದಲ್ಲೇ ಜಗತ್ತಿಗೆ ಬರುತ್ತಿರುವ ನನ್ನ ಮುದ್ದಿನ ಗ್ರ್ಯಾಂಡ್‌ ಬೇಬಿಗೆ ಸ್ವಾಗತ” ಅಂತ ಕಾಮೆಂಟ್‌ ಮಾಡಿದ್ದಾರೆ.

ಇನ್ನು ಈ ಫೋಟೊಗಳಿಗೆ ಅಭಿಮಾನಿಗಳಲ್ಲಿ ಕೆಲವರು ಶುಭಾಷಯ ತಿಳಿಸಿದರೆ, ಇನ್ನೂ ಕೆಲವರಂತೂ ಇನ್ನೂ ಮದುವೆಯಾಗಿಲ್ಲ, ಮದುವೆಗಿಂತ ಮುಂಚೆಯೇ ತಾಯಿ ಆಗ್ತಾ ಇದೀರಾ, ತಂದೆ ಯಾರು? ಅಂತ ಕಾಮೆಂಟ್‌ ಮಾಡಿದ್ದಾರೆ.

ಈ ಹಿಂದೆ ಕತ್ರಿನಾ ಕೈಫ್‌ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡ್ತಾ ಇತ್ತು.

-masthmagaa.com

Contact Us for Advertisement

Leave a Reply