ಹಿಂದೂಗೆ ಕನ್ವರ್ಟ್ ಆದ್ರ ಎಂದವರಿಗೆ ಖಡಕ್ ಉತ್ತರ ಕೊಟ್ಟ ನಟಿ ಖುಷ್ಬೂ ಸುಂದರ್!

masthmagaa.com:

ʻದಿ ಕೇರಳ ಸ್ಟೋರಿʼ ಸಿನಿಮಾ ಬಿಡುಗಡೆಯಾಗಿ ಸಾಕಷ್ಟು ವಿವಾಧಕ್ಕೆ ಕಾರಣವಾಗುತ್ತಿದೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ಮತಾಂತರಗೊಳಿಸಿ ಹೇಗೆ ಉಗ್ರ ಸಂಘಟನೆಗೆ ಕಳುಹಿಸಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಈ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೇ ನಟಿ ಖುಷ್ಬೂ ಅವರ ಮೇಲೆ ಅವರು ಮದುವೆಯಾಗಲು ಮತಾಂತರಗೊಂಡಿದ್ರು ಎಂಬ ಆರೋಪ ಕೇಳಿಬರುತ್ತಿದೆ.

ನಟಿ ಖುಷ್ಬೂ ಅವರಿಗೆ ಈಗ 52 ವರ್ಷ. ಇದೀಗ ಅವರ ಹೆಸರು ಕೇಳಿಬರಲು ಕಾರಣ ಅವರು ಮುಸ್ಲಿಂ ಧರ್ಮದ ನಟಿ, ಹಿಂದೂ ಧರ್ಮದ ಯುವಕನನ್ನು ವರಿಸಿ ಮದುವೆಯಾಗಿದ್ದರು. ಹೀಗಾಗಿ ʻದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ ಖುಷ್ಬೂ ಅವರಿಗೆ ಮದುವೆಗಾಗಿ ಮತಾಂತರಗೊಂಡಿದ್ದೀರಾ? ಎಂಬ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಕೇಳಲಾಗುತ್ತಿದೆ.

ಖುಷ್ಬೂ ಅವರು ಇಂತಹ ವ್ಯಂಗ್ಯ ಪ್ರಶ್ನೆಗೆ ಖಡಕ್‌ ಉತ್ತರ ನೀಡಿದ್ದಾರೆ.
ʻʻಯಾರು ನಮ್ಮ ಮದುವೆಯನ್ನು ಪ್ರಶ್ನೆ ಮಾಡುತ್ತಿದ್ದಾರೋ ಅಥವಾ ಸುಂದರ್​ ಅವರನ್ನು ಮದುವೆಯಾಗಲು ಮತಾಂತರಗೊಂಡೆ ಎನ್ನುತ್ತಿದ್ದಾರೋ ಅವರು ಸ್ವಲ್ಪ ಕೇಳಿ. ನಾನು ಮತಾಂತರಗೊಂಡಿಲ್ಲ. ಅಥವಾ ಯಾರೂ ಮತಾಂತರವಾಗು ಅಂತ ಒತ್ತಡ ಹೇರಿಲ್ಲ. ಅವರಿಗೆ ಸ್ವಲ್ಪನಾದರೂ ಕಾನೂನಿನ ಅರಿವು ಇರಬೇಕು. ನಮ್ಮ ದೇಶದಲ್ಲಿ ವಿಶೇಷ ವಿವಾಹ ಕಾಯ್ದೆ ಇದೆ ಅನ್ನೋದು ನಿಮಗೆಲ್ಲಾ ಗೊತ್ತಿಲ್ಲದೆ ಇರೋದು ಬೇಸರದ ಸಂಗತಿ. ನನ್ನ ದಾಂಪತ್ಯಕ್ಕೆ 23 ವರ್ಷ ಮುಗಿದಿದೆ. ನಮ್ಮ ಸುಂದರ ವೈವಾಹಿಕ ಜೀವನವು ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿಯ ತಳಪಾಯದ ಮೇಲೆ ನಿಂತಿದೆ ಎಂದು ಟ್ವೀಟ್​ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply