ಅವಳಿ ಮಕ್ಕಳ ಪೂರ್ಣ ಹೆಸರು ರಿವೀಲ್‌ ಮಾಡಿದ ನಟಿ ನಯನತಾರಾ!

masthmagaa.com:

ಕಾಲಿವುಡ್‌ನ ಕ್ಯೂಟ್ ಕಪಲ್ಸ್‌ ಅಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿಯೂ ಕೂಡ ಒಂದು. ದಂಪತಿ ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದ್ದಾರೆ.

ನಟಿ ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆ ವೇಳೆ ಅವರಿಗೆ ಮಕ್ಕಳ ಬಗ್ಗೆ ಪ್ರಶ್ನೆ ಎದುರಾಯಿತು. ಈ ಸಮಯದಲ್ಲಿ ಅವರು ಅವಳಿಗಳ ಪೂರ್ಣ ಹೆಸರನ್ನು ಬಹಿರಂಗಪಡಿಸಿದರು. ತನ್ನ ಅವಳಿ ಮಕ್ಕಳ ಪೂರ್ಣ ಹೆಸರುಗಳನ್ನು ಕೇಳಿದಾಗ, ಖುಷಿಯಿಂದ, ನಟಿ ವೇದಿಕೆಯಲ್ಲಿ ‘ನನ್ನ ಮೊದಲ ಮಗ ಉಯಿರ್ ರುದ್ರೋನಿಲ್ ಎನ್ ಶಿವನ್ ಮತ್ತು ನನ್ನ ಎರಡನೇ ಮಗ ಉಲಗ್ ಧೈವಾಗ್ ಎನ್ ಶಿವನ್’ ಎಂದು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply