ಹಸೆಮಣೆ ಏರಿದ, ʼಜೊತೆ ಜೊತೆಯಲಿʼ ನಟಿ ಶಿಲ್ಪಾ ಅಯ್ಯರ್‌..

masthmagaa.com:

ʼಜೊತೆ ಜೊತೆಯಲಿʼ ಸಿರೀಯಲ್‌ ಖ್ಯಾತಿಯ ನಟಿ ಶಿಲ್ಪಾ ಅಯ್ಯರ್‌ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಶಿಲ್ಪಾ ಅವರು ಸಚಿನ್‌ ವಿಶ್ವನಾಥ್‌ ಅನ್ನೋ ಲಾಯರ್‌ ಒಬ್ಬರನ್ನ ಮದುವೆಯಾಗಿದ್ದಾರೆ. ಮನೆಯವರೇ ನೋಡಿ ನಿಶ್ಚಯಿಸಿದ ಮದುವೆಯಾಗಿದ್ದು, ಕಟುಂಬಸ್ಥರ ಮತ್ತು ಆಪ್ತರ ಸಮ್ಮುಖದಲ್ಲಿ ಶುಭಕಾರ್ಯ ನೆರವೆರಿದೆ. ಪ್ರೇಮಿಗಳ ದಿನಾಚರಣೆಯಂದು ಸೋಷಿಯಲ್‌ ಮೀಡಿಯಾದಲ್ಲಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಎಂಗೇಜ್‌ ಆಗಿರುವ ವಿಷಯ ತಿಳಿಸಿದ್ದರು. ಅಂದ್ಹಾಗೆ ಶಿಲ್ಪಾ ಅಯ್ಯರ್‌ ಅವರು ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ, ನಾಗಮಂಡಲ ಸೇರಿದಂತೆ ಹಲವಾರು ಸೀರಿಯಲ್‌ನಲ್ಲಿ ನಟಿಸಿದ್ದಾರೆ. ʼಜೊತೆ ಜೊತೆಯಲಿʼ ಟೀಂ ಹಾಗೂ ಹಲವಾರು ಕಲಾವಿದರು, ಅಭಿಮಾನಿಗಳು ಶುಭಸಮಾರಂಭದಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

-masthmagaa.com

Contact Us for Advertisement

Leave a Reply