ಮದ್ಯದ ‘ಹೊಳೆ’ ಹರಿಸಿದ ತಾಲಿಬಾನಿಗಳು!

masthmagaa.com:

ವಿಶ್ವದ ವಿವಿಧ ದೇಶಗಳಲ್ಲಿ ಹೊಸ ವರ್ಷದ ನೆಪದಲ್ಲಿ ಮದ್ಯದ ಹೊಳೆ ಹರಿಸಿದ್ರೆ,
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಗುಪ್ತಚರ ಇಲಾಖೆ ಸದಸ್ಯರು ಮದ್ಯವನ್ನೆ ಹೊಳೆಗೆ ಹರಿಸಿದ್ದಾರೆ. ಹೌದು..ಅಫ್ಘಾನಿಸ್ತಾನದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಈ ಹಿಂದೆ ಅಮೆರಿಕ ಬೆಂಬಲಿತ ಸರ್ಕಾರ ಇದ್ದಾಗಲೂ ಇಲ್ಲಿ ಮದ್ಯ ಉತ್ಪಾದನೆ ಮತ್ತು ಮಾರಾಟವನ್ನು ಬ್ಯಾನ್ ಮಾಡಲಾಗಿತ್ತು. ಅದ್ರಲ್ಲೂ ತಾಲಿಬಾನ್ ಆಳ್ವಿಕೆಯಲ್ಲಿ ಮದ್ಯ ನಿಷೇಧವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗ್ತಿದೆ. ಯಾಕಂದ್ರೆ ಷರಿಯಾ ಕಾನೂನಿನಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ.. ಆದ್ರೂ ಕೂಡ ಕದ್ದು ಮುಚ್ಚಿ ಮದ್ಯ ಮಾರಾಟ ನಡೆಸಲಾಗ್ತಿದೆ. ಇದೇ ರೀತಿ ಸಂಗ್ರಹಿಸಿಟ್ಟಿದ್ದ 3 ಸಾವಿರ ಲೀಟರ್ ಮಧ್ಯವನ್ನು ವಶಕ್ಕೆ ಪಡೆದ ತಾಲಿಬಾನಿಗಳು, ಕಾಬೂಲ್​​​ನಲ್ಲಿ ಕಾಲುವೆಗೆ ಚೆಲ್ಲಿದ್ದಾರೆ. ಈ ಸಂಬಂಧ ಡೈರೆಕ್ಟೋರೇಟ್ ಆಫ್ ಇಂಟೆಲಿಜೆನ್ಸ್​​​​​​ನಿಂದ ವಿಡಿಯೋವೊಂದನ್ನು ಕೂಡ ರಿಲೀಸ್ ಮಾಡಲಾಗಿದೆ. ಇದ್ರಲ್ಲಿ ಸಮವಸ್ತ್ರದಲ್ಲಿರೋ ಏಜೆಂಟ್​​ಗಳು ಮದ್ಯವನ್ನು ಕಾಲುವೆಗೆ ಚೆಲ್ಲೋದು, ಅದೇ ರೀತಿ ಮದ್ಯ ಸಂಗ್ರಹಿಸಿಟ್ಟಿದ್ದವರನ್ನು ಕೈ ಕಟ್ಟಿ ನಿಲ್ಲಿಸಿರೋದನ್ನು ನೋಡಬಹುದಾಗಿದೆ. ನಂತರ ಮಾತಡಿರೋ ಅಧಿಕಾರಿಯೊಬ್ಬರು, ಮುಸ್ಲಿಮರು ಮದ್ಯ ತಯಾರಿಕೆ ಮತ್ತು ವಿತರಣೆಯಿಂದ ದೂರ ಇರಲೇಬೇಕು ಅಂತ ಹೇಳಿದ್ದಾರೆ. ಘಟನೆಯಲ್ಲಿ ಮೂವರನ್ನು ಅರೆಸ್ಟ್ ಕೂಡ ಮಾಡಲಾಗಿದೆ.

-masthmagaa.com

Contact Us for Advertisement

Leave a Reply