ನಮ್ಮ ಸರ್ಕಾರದ ಬಗ್ಗೆ ಮಾತಾಡಕ್ಕೆ ಯಾರಿಗೂ ಹಕ್ಕಿಲ್ಲ: ತಾಲಿಬಾನ್

masthmagaa.com:

ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸ್ತೀವಿ ಅಂತಿದ್ದ ತಾಲಿಬಾನಿಗಳು ತಮ್ಮ ತಮ್ಮಲ್ಲೇ ಅಧಿಕಾರ ಹಂಚಿಕೊಂಡು ಸರ್ಕಾರ ರಚಿಸಿದ್ದಾರೆ. ಸರ್ಕಾರದಲ್ಲಿ 17 ಮಂದಿ ನಿಷೇಧಿತ ವ್ಯಕ್ತಿಗಳಿಗೆ ಜಾಗ ನೀಡಿದೆ. ಇದೀಗ ಇಸ್ಲಾಮಿಕ್ ಎಮಿರೇಟ್​​​ನಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸಬೇಕು ಅಂತ ಹೇಳೋಕೆ ಪಾಕಿಸ್ತಾನ ಸೇರಿದಂತೆ ಯಾವ ದೇಶಗಳಿಗೂ ಹಕ್ಕಿಲ್ಲ ಅಂತ ತಾಲಿಬಾನ್ ವಕ್ತಾರ, ಮಾಹಿತಿ ಇಲಾಖೆಯ ಉಪಸಚಿವ ಝೈಬುಲ್ಲಾ ಮುಜಾಹಿದ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾಗ್ಬೇಕು ಅಂತ ಹೇಳಿದ್ರು. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಝೈಬುಲ್ಲಾ ಮುಜಾಹಿದ್ ಹೀಗೆ ತಿರುಗೇಟು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಟಿವಿ ಕಾರ್ಯಕ್ರಮವೊಂದ್ರಲ್ಲಿ ಮಾತಾಡಿದ್ದ ಮತ್ತೋರ್ವ ತಾಲಿಬಾನ್ ನಾಯಕ ಮೊಹ್ಮದ್ ಮೊಬೀನ್ ಕೂಡ, ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸೋದು ಯಾಕೆ..? ನೆರೆಹೊರೆಯ ದೇಶಗಳು ಸರ್ಕಾರದಲ್ಲಿ ತಮ್ಮ ಪ್ರತಿನಿಧಿಗಳನ್ನು, ಗೂಢಾಚಾರಿಗಳನ್ನು ಹೊಂದಲಿ ಅಂತನಾ ಅಂತ ಪ್ರಶ್ನಿಸಿದ್ರು. ಇನ್ನು ಇದೇ ಶುಕ್ರವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಭಾಗಿಯಾಗ್ತಿದ್ದು, ಅಲ್ಲೂ ಅಫ್ಘಾನಿಸ್ತಾನ ಮತ್ತು ಕಾಶ್ಮೀರದ ಸುದ್ದಿ ಎತ್ತಲು ಸಿದ್ಧತೆ ಮಾಡ್ಕೊಳ್ತಿದ್ದಾರೆ ಅಂತ ಗೊತ್ತಾಗಿದೆ. ಇವೆಲ್ಲದ್ರ ನಡುವೆ ಕಟ್ಟರ್​​ಪಂಥಿ ನಾಯಕ ಮೌಲಾನಾ ಅಬ್ದುಲ್ ಅಜಿಜ್ ಎಂಬಾತ ​​ಪಾಕಿಸ್ತಾನದ ಇಸ್ಲಾಮಾಬಾದ್​​ನಲ್ಲಿ ಹೆಣ್ಮಕ್ಕಳ ಧಾರ್ಮಿಕ ಶಾಲೆಯ ಮೇಲೆ ತಾಲಿಬಾನಿಗಳ ಬಾವುಟ ಹಾರಿಸಿದ್ದು, ಪೊಲೀಸರು ಕೇಸ್ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply