ಅಫ್ಘನ್ ಪತನ ದೋಹ ಸಹಿ ಜೊತೆಗೇ ಶುರುವಾಗಿತ್ತು: ಮಾಜಿ ಎನ್​​ಎಸ್​​ಎ

masthmagaa.com:

ಅಫ್ಘಾನಿಸ್ತಾನದ ಪತನ ಅಮೆರಿಕ ಮತ್ತು ತಾಲಿಬಾನಿಗಳು 2019ರಲ್ಲಿ ದೋಹಾ ಒಪ್ಪಂದಕ್ಕೆ ಸಹಿ ಹಾಕಿದಾಗಲೇ ಶುರುವಾಗಿತ್ತು ಅಂತ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್​ದುಲ್ಲಾ ಮೊಹಿದ್ ಹೇಳಿದ್ಧಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನಿಡಿರೋ ಅವ್ರು, ಅಫ್ಘಾನಿಸ್ತಾನದಲ್ಲೇ ಇದ್ರೆ ತಾಲಿಬಾನಿಗಳು ಗಲ್ಲಿಗೇರಿಸ್ತಾರೆ ಅಂತ ನಾನು ಅಮೆರಿಕ ಬಂದು ಸೆಟಲ್ ಆದೆ. ಅಧ್ಯಕ್ಷ ಅಶ್ರಫ್ ಘನಿ ಈಗಲೂ ಯುಎಇಯಲ್ಲಿ ವಾಸಿಸ್ತಿದ್ದಾರೆ. ಯಾವಾಗ ಅಫ್ಘಾನಿಸ್ತಾನದ ಭದ್ರತಾ ಪಡೆ ನಿಯಂತ್ರಣ ಕಳೆದುಕೊಳ್ತೋ ಆಗ ಅಫ್ಘಾನಿಸ್ತಾನ ಪತನವಾಯ್ತು ಅನ್ನೋದು ನಮಗೆ ಗೊತ್ತಾಯ್ತು. ತಾಲಿಬಾನ್ ಜೊತೆ ಮಾತುಕತೆ ಬಗ್ಗೆ ನಮಗೆ ಅಸಮಾಧಾನ ಇತ್ತು. ಆಗಸ್ಟ್​ 15ರಂದು ನಾನು ಸೇರಿದಂತೆ ನಿಯೋಗವೊಂದು ದೋಹಾಗೆ ಹೋಗಿ ಪವರ್ ಶೇರಿಂಗ್ ಸಂಬಂಧ ಚೌಕಾಶಿ ನಡೆಸೋದಕ್ಕೆ ಸಿದ್ಧತೆ ನಡೆಸಿದ್ವಿ. ಆದ್ರೆ ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯ್ತು ಅಂತ ಹಮ್​ದುಲ್ಲಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply