ತಾಲಿಬಾನಿಗಳು ಬದಲಾದ್ರಾ? ಎಂತೆಂಥಾ ಕೆಲಸ ಮಾಡ್ತಿದ್ದಾರೆ ನೋಡಿ!

masthmagaa.com:

ಅಫ್ಘಾನಿಸ್ತಾನದ ತಾಲಿಬಾನ್ ನಾಯಕರು ಇರಾನ್​​ ಸರ್ಕಾರವನ್ನು ಪುಸಲಾಯಿಸೋಕೆ ಅಂತ ಹೋಗಿದ್ದಾರೆ. ಈ ನಡುವೆ ತಾಲಿಬಾನ್​​​ ಟೇಕೋವರ್ ವೇಳೆ ಟಕ್ಕರ್ ಕೊಟ್ಟು ಈಗ ದೇಶ ಬಿಟ್ಟಿರೋ ನಾಯಕರನ್ನು ಕೂಡ ಭೇಟಿಯಾಗಿದ್ದಾರೆ. ಪಂಜ್​ಶಿರ್​​ನ ರೆಸಿಸ್ಟೆನ್ಸ್ ನಾಯಕ ಅಹ್ಮದ್ ಮಸ್ಸೌದ್, ಮೊದಲು ನೀವು ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸಿ.. ಆಮೇಲೆ ನಾವು ಅಲ್ಲಿಗೆ ಬರ್ತೀವಿ ಅಂತ ಹೇಳಿದ್ದಾರೆ ಅಂತ ಗೊತ್ತಾಗಿದೆ.
ತಾಲಿಬಾನಿಗಳನ್ನು ಕಟುವಾಗಿ ಟೀಕಿಸಿದ್ದ ಫ್ರೊಫೆಸರ್​ನ್ನು ಬಿಡುಗಡೆ ಮಾಡಲಾಗಿದೆ. ಅಫ್ಘನ್ ಯುನಿವರ್ಸಿಟಿಯ ಪ್ರೊಫೆಸರ್ ಫೈಜುಲ್ಲಾ ಜಲಾಲ್​​ ತಾಲಿಬಾನಿಗಳನ್ನು ಟೀಕಿಸಿದ್ರು. ಹೀಗಾಗಿ ಕಾಬೂಲ್​​ನಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ತಾಲಿಬಾನಿಗಳು, ಅಜ್ಞಾತ ಸ್ಥಳಕ್ಕೆ ಕರ್ಕೊಂಡು ಹೋಗಿದ್ರು. ನಾಲ್ಕು ದಿನಗಳ ಬಳಿಕ ಈಗ ಬಿಡುಗಡೆ ಮಾಡಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರೊಫೆಸರ್ ಮಗಳು, ನನ್ನ ತಂದೆ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ರು. ಆದ್ರೆ ಈಗ ಏನೂ ಸಾಕ್ಷ್ಯ ಸಿಗಲಿಲ್ಲ ಅಂತ ಬಿಡುಗಡೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್​​, ಪ್ರೊಫೆಸರ್ ಜಲಾಲ್ ವ್ಯವಸ್ಥೆ ವಿರುದ್ಧ ಮಾತಾಡಿದ್ರು. ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ರು. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿತ್ತು ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply