ಅಮೆರಿಕದ ಪ್ರಸ್ತಾವನೆಗೆ ಆಫ್ಘನ್ ಅಧ್ಯಕ್ಷ ನಕಾರ!

masthmagaa.com:

ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಯೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕ ಅಫ್ಘಾನಿಸ್ತಾನದಲ್ಲಿ ಚುನಾಯಿತ ಮತ್ತು ಬಂಡುಕೋರರನ್ನೊಳಗೊಂಡ ಮಧ್ಯಂತರ ಸರ್ಕಾರ ಸ್ಥಾಪನೆಯ ಪ್ರಸ್ತಾಪ ಮುಂದಿಟ್ಟಿದೆ. ಅದ್ರ ಬೆನ್ನಲ್ಲೇ ಅಧ್ಯಕ್ಷ ಅಶ್ರಫ್ ಘನಿ ಅಮೆರಿಕದ ಈ ಪ್ರಸ್ತಾವನೆಯನ್ನು ತಳ್ಳಿ ಹಾಕಲು ನಿರ್ಧರಿಸಿದ್ದು, 6 ತಿಂಗಳ ಒಳಗಾಗಿ ಅಧ್ಯಕ್ಷೀಯ ಚುನಾವಣೆ ನಡೆಸೋ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಅಫ್ಘನ್ ಸರ್ಕಾರ ಮತ್ತು ಬಂಡುಕೋರರ ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ. ಅದರ ಪ್ರಕಾರ ಮೇ 1ರೊಳಗೆ ಅಮೆರಿಕ ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಅಷ್ಟರೊಳಗೆ ಆಫ್ಘನ್ ಸರ್ಕಾರ ಮತ್ತು ಬಂಡುಕೋರರ ನಡುವೆ ಶಾಂತಿ ಸ್ಥಾಪಿಸಿಬಿಡೋಣ ಅನ್ನೋದು ಅಮೆರಿಕದ ಗುರಿ.

-masthmagaa.com

Contact Us for Advertisement

Leave a Reply