ತಾಲಿಬಾನ್ ಪರವಾಗಿ ನಡೆದ ಪ್ರತಿಭಟನೆಯ ಅಸಲಿಯತ್ತು ಬಯಲು!

masthmagaa.com:

ಇತ್ತೀಚೆಗೆ ತಾಲಿಬಾನಿಗಳನ್ನು ಬೆಂಬಲಿಸಿ ಒಂದಷ್ಟು ಮಹಿಳಾ ವಿದ್ಯಾರ್ಥಿಗಳು ಕಾಬೂಲ್ ಯುನಿವರ್ಸಿಟಿಯಲ್ಲಿ ಸೇರಿದ್ದರ ಬಗ್ಗೆ ಮೊನ್ನೆ ವರದಿ ಮಾಡಿದ್ವಿ. ಆದ್ರೆ ಅವರನ್ನೆಲ್ಲಾ ಹೆದರಿಸಿ, ಬೆದರಿಸಿ ಯುನಿವರ್ಸಿಟಿಯ ಸೆಂಟ್ರಲ್ ಹಾಲ್​ನಲ್ಲಿ ಕೂರಿಸಲಾಗಿತ್ತು ಅಂತ ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿದ್ಯಾರ್ಥಿನಿಯೊಬ್ಬರು, ತಾಲಿಬಾನಿಗಳು ನಮ್ಮನ್ನು ಬಲವಂತವಾಗಿ ಒಂದು ಗಂಟೆವರೆಗೆ ವಿವಿಯ ಹಾಲ್​​ನಲ್ಲಿ ಕೂರುವಂತೆ ಮಾಡಿದ್ರು. ಈ ವೇಳೆ ಕಪ್ಪು ಬಟ್ಟೆಗಳನ್ನು ನೀಡಿ, ಕಂಪ್ಲೀಟಾಗಿ ಕವರ್ ಮಾಡಿಕೊಳ್ಳುವಂತೆ ಕೂಡ ಆದೇಶಿಸಿದ್ರು. ಒಂದು ವೇಳೆ ಹೇಳಿದಂತೆ ಕೇಳದೇ ಇದ್ರೆ, ವಿಶ್ವವಿದ್ಯಾಲಯದಿಂದ ತೆಗೆದು ಹಾಕ್ತೀವಿ. ಬೇರೆ ಯಾವ ವಿವಿಯಲ್ಲೂ ಶಿಕ್ಷಣ ಪಡೆಯದಂತೆ ಮಾಡ್ತೀವಿ ಅಂತ ಹೆದರಿಸಿದ್ರು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply