ಅಫ್ಘಾನ್‌ನಲ್ಲೂ ಭಾರಿ ಮಳೆ, ಹಿಮಪಾತ: 39 ಸಾವು, 30 ಜನರಿಗೆ ಗಾಯ!

masthmagaa.com:

ಪಾಕ್‌ನಲ್ಲಿ ಅಬ್ಬರಿಸ್ತಿರೊ ಮಳೆರಾಯ ಅಫ್ಘಾನಿಸ್ತಾನದಲ್ಲೂ ತನ್ನ ರೌದ್ರ ನರ್ತನ ಶುರು ಮಾಡಿದ್ದಾನೆ. ಇದೀಗ ಅಪಘಾನಿಸ್ತಾನದಲ್ಲಿ ಭಾರಿ ಮಳೆ ಹಾಗೂ ಹಿಮಪಾತ ಪರಿಣಾಮ 39 ಜನ ಸಾವನ್ನಪ್ಪಿದ್ದಾರೆ. ಹಾಗೂ ದೇಶದಾದ್ಯಂತ 30 ಜನ ಗಾಯಗೊಂಡಿದ್ದಾರೆ ಅಂತ ಅಫ್ಘಾನ್‌ನ ವಿಪತ್ತು ನಿರ್ವಹಣಾ ಸಚಿವಾಲಯ ಹೇಳಿದೆ. ಅಲ್ದೇ 637 ಮನೆಗಳು ನಾಶವಾಗಿದ್ದು, 14 ಸಾವಿರ ಜಾನುವಾರುಗಳು ಕೂಡ ಮೃತಪಟ್ಟಿವೆ ಅಂತ ತಾಲಿಬಾನ್‌ ಆಡಳಿತ ತಿಳಿಸಿದೆ.

-masthmagaa.com

Contact Us for Advertisement

Leave a Reply