ಅಫ್ಘಾನಿಸ್ತಾನದಲ್ಲಿ ಇನ್ನೂ ಎಷ್ಟು ಮಂದಿ ಭಾರತೀಯರಿದ್ದಾರೆ?

masthmagaa.com:

ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ 200 ಮಂದಿ ಭಾರತೀಯ ನಾಗರಿಕರನ್ನು ಅಪಹರಿಸಿ, ಬಿಡುಗಡೆ ಮಾಡಲಾಗಿದೆ. ಏರ್​ಪೋರ್ಟ್​ ಬಳಿ ಸ್ಥಳಾಂತರಕ್ಕಾಗಿ ಕಾದು ನಿಂತಿದ್ದ ಭಾರತೀಯರನ್ನು ತಾಲಿಬಾನಿಗಳು ಹತ್ತಿರದಲ್ಲೇ ಇದ್ದ ಒಂದು ಗ್ಯಾರೇಜ್​​ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಕೆಲಗಂಟೆಗಳ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಸದ್ಯ ಅವರೆಲ್ಲಾ ಏರ್​ಪೋರ್ಟ್​​ನಲ್ಲಿದ್ದು, ಅವರನ್ನು ಕರೆತರಲು ಭಾರತ ವಿಶೇಷ ವಿಮಾನ ಕಳುಹಿಸುವ ಸಾಧ್ಯತೆ ಇದೆ. ನಿನ್ನೆಯಷ್ಟೇ ಪ್ರಧಾನಿ ಮೋದಿ ತಾಲಿಬಾನಿಗಳ ವಿರುದ್ಧವಾಗಿ ಮಾತನಾಡಿದ್ರು. ಅಂದ್ರೆ ವಿನಾಶಕಾರಿ ಶಕ್ತಿ ಮತ್ತು ಭಯೋತ್ಪಾದನೆ ಮೂಲಕ ಸಾಮ್ರಾಜ್ಯ ಸೃಷ್ಟಿಸುವ ಸಿದ್ಧಾಂತವನ್ನ ಅನುಸರಿಸೋರು ಸ್ವಲ್ಪ ಸಮಯದವರೆಗೆ ಮಾತ್ರ ಪ್ರಾಬಲ್ಯ ಸಾಧಿಸಬಹುದು. ಆದ್ರೆ ಅವರ ಅಸ್ತಿತ್ವ ಶಾಶ್ವತವಲ್ಲ. ಕಾರಣ ಮಾನವೀಯತೆ ಅನ್ನೋದನ್ನ ಅವರು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಅಂತ ಹೇಳಿದ್ರು. ಅದ್ರ ಮರುದಿನವೇ ತಾಲಿಬಾನಿಗಳು ಈ ಕೃತ್ಯ ಎಸಗಿದ್ದಾರೆ. ಇತ್ತೀಚೆಗೆ ಭಾರತೀಯರಿಗೆ ಏರ್​ಪೋರ್ಟ್​ವರೆಗೂ ಎಸ್ಕಾರ್ಟ್​ ಮಾಡಿ ಕಳುಹಿಸಿದ್ದ ತಾಲಿಬಾನಿಗಳು, ಈಗ ಯಾಕೆ ಹೀಗೆ ಮಾಡಿದ್ರು ಅನ್ನೋದು ಸಾಕಷ್ಟು ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ. ಆದ್ರೆ ತಾಲಿಬಾನಿಗಳು ಮಾತ್ರ ನಾವು ಅಪಹರಣ ಮಾಡಿಲ್ಲ ಅಂತ ಹೇಳಿದ್ದಾರೆ.)

ಇವತ್ತು ಬೆಳಗ್ಗೆಯಷ್ಟೇ ಕಾಬೂಲ್​ನಿಂದ 85 ಮಂದಿ ಭಾರತೀಯರನ್ನು ಇಂಡಿಯನ್ ಏರ್​ಫೋರ್ಸ್​​ನ ಸಿ130-ಜೆ ವಿಮಾನದಲ್ಲಿ ತಜಕಿಸ್ಥಾನದ ದುಶಾನ್ಬೆ ಸ್ಥಳಾಂತರ ಮಾಡಲಾಗಿತ್ತು.

ಭಾರತ ರಾಯಭಾರಿ ಕಚೇರಿ ಸಿಬ್ಬಂದಿ ಸೇರಿದಂತೆ ಹಲವರನ್ನು ಈಗಾಗಲೇ ಅಫ್ಘಾನಿಸ್ತಾನದಿಂದ ಕರ್ಕೊಂಡು ಬಂದಿದೆ. ಆದ್ರೆ ಇನ್ನೂ ಕೂಡ 200 ಮಂದಿ ಸಿಖ್ ಮತ್ತು ಹಿಂದೂಗಳು ಸೇರಿದಂತೆ ಒಟ್ಟು 1000 ಮಂದಿ ಭಾರತೀಯರು ಅಲ್ಲೇ ಇದ್ದಾರೆ. ಆದ್ರೆ ಅವರೆಲ್ಲಾ ಎಲ್ಲಿದ್ದಾರೆ.. ಯಾವ ಸ್ಥಿತಿಯಲ್ಲಿದ್ದಾರೆ ಅನ್ನೋದನ್ನು ಪತ್ತೆಹಚ್ಚಲು ಕಷ್ಟವಾಗ್ತಿದೆ ಅಂತ ಗೃಹ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply