ವಿಮಾನ ಅಪಹರಣ ನಾಟಕ ಎಲ್ಲಿ? ಹೇಗೆ? ಏನು?

masthmagaa.com:

ಯುಕ್ರೇನ್​​ಗೆ ಸೇರಿದ ಸೇನಾ ವಿಮಾನವೊಂದು ಅಪಹರಣಕ್ಕೀಡಾಗಿದೆ ಅನ್ನೋ ಸುದ್ದಿ ಫುಲ್ ಸಂಚಲನ ಮೂಡಿಸಿತ್ತು. ಆದ್ರೆ ಈ ಸುದ್ದಿಯನ್ನು ಯುಕ್ರೇನ್ ನಿರಾಕರಿಸಿದೆ. ರಷ್ಯಾದ ಸುದ್ದಿ ಸಂಸ್ಥೆ ಟಾಸ್​ನಲ್ಲಿ ವಿಮಾನ ಅಪಹರಣದ ವರದಿ ಬಂದಿತ್ತು. ಭಾನುವಾರ ಯುಕ್ರೇನಿಗಳನ್ನು ಕಾಬೂಲ್​ನಿಂದ ಸ್ಥಳಾಂತರ ಮಾಡಲು ಸೇನಾ ವಿಮಾನವೊಂದು ಬಂದಿತ್ತು ಆದ್ರೆ ಕೆಲ ಶಸ್ತ್ರಧಾರಿ ಅಪರಿಚಿತರು ವಿಮಾನವನ್ನು ಹೈಜಾಕ್ ಮಾಡಿ, ಇರಾನ್​​​ಗೆ ಹಾರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಖುದ್ದು ಯುಕ್ರೇನ್​ನ ಉಪ ವಿದೇಶಾಂಗ ಸಚಿವ ಯೆವ್ಜೆನಿ ಯೆನಿನ್ ಮಾಹಿತಿ ನೀಡಿದ್ದಾರೆ ಅಂತ ಸುದ್ದಿ ಪ್ರಕಟಿಸಿತ್ತು. ಆದ್ರೆ ಈ ಬಗ್ಗೆ ಈಗ ಪ್ರತಿಕ್ರಿಯಿಸಿರೋ ಯುಕ್ರೇನ್ ವಿದೇಶಾಂಗ ಇಲಾಖೆ ನಮ್ಮ ಯಾವುದೇ ವಿಮಾನ ಅಪಹರಣ ಅಥವಾ ಕಳ್ಳತನ ಆಗಿಲ್ಲ ಅಂತ ಸ್ಪಷ್ಟಪಡಿಸಿದೆ. 31 ಯುಕ್ರೇನ್ ಪ್ರಜೆಗಳು ಸೇರಿದಂತೆ 83 ಮಂದಿಯನ್ನು ಹೊತ್ತ ವಿಮಾನ ಯುಕ್ರೇನ್​​ಗೆ ಮರಳಿದೆ ಅಂತ ಹೇಳಿದೆ. ಅತ್ತ ಇರಾನ್ ನಾಗರಿಕ ವಿಮಾನಯಾನ ಪ್ರಾಧಿಕಾರ ಕೂಡ ವಿಮಾನ ಹೈಜಾಕ್ ಸುದ್ದಿಯನ್ನು ತಳ್ಳಿ ಹಾಕಿದ್ದು, ವಿಮಾನ ಇಂಧನ ತುಂಬಿಸಿಕೊಳ್ಳಲು ನಮ್ಮಲ್ಲಿ ಲ್ಯಾಂಡ್ ಆಗಿತ್ತು. ಆಮೇಲೆ ವಾಪಸ್ ಯುಕ್ರೆನ್​​ಗೆ ಹೋಗಿದೆ ಅಂತ ಸ್ಪಷ್ಟನೆ ನೀಡಿದೆ.

-masthmagaa.com

Contact Us for Advertisement

Leave a Reply