ಅಫ್ಘಾನಿಸ್ತಾನದಲ್ಲಿ ಲ್ಯಾಂಡ್ ಆದವು ಆಹಾರ ತುಂಬಿದ ವಿಮಾನಗಳು!

masthmagaa.com:

ಅಫ್ಘನಿಸ್ತಾನವನ್ನ ತಾಲಿಬಾನಿಗಳು ಟೇಕೋವರ್ ಮಾಡುವಾಗ ಮತ್ತು ಮಾಡಿದ ನಂತರ ಜನಜೀವನ ಅಸ್ತವ್ಯಸ್ತವಾಗಿದೆ. ತಿನ್ನೋಕೆ ಆಹಾರ ಇಲ್ಲದೆ, ಕುಡಿಯೋಕೆ ನೀರಿಲ್ಲದೆ, ಔಷಧ, ಲಸಿಕೆಗಳಿಲ್ಲದೆ ಜನ ಕಂಗಾಲಾಗಿದ್ದಾರೆ. ಇದೀಗ ವಿಶ್ವಸಂಸ್ಥೆಯ ವರ್ಲ್ಡ್​ ಫೂಡ್​ ಪ್ರೋಗ್ರಾಂನ ಹ್ಯುಮನಿಟೇರಿಯನ್​ ಫ್ಲೈಟ್​​ಗಳು ಮತ್ತೆ ಅಫ್ಘನಿಸ್ತಾನದಲ್ಲಿ ಲ್ಯಾಂಡ್ ಆಗಿವೆ. ಈ ವಿಮಾನಗಳಲ್ಲಿ ಆಹಾರ, ನೀರು, ಔಷಧ, ಇತರ ಅಗತ್ಯವಸ್ತುಗಳನ್ನ ಕಳಿಸಿಕೊಡಲಾಗಿದೆ. ಸದ್ಯ ಉತ್ತರ ಅಫ್ಘನಿಸ್ತಾನದ ಮಝರ್ ಐ ಶರೀಫ್​ ಮತ್ತು ದಕ್ಷಿಣ ಅಫ್ಘನಿಸ್ತಾನದ ಕಂದಹಾರ್​ನಲ್ಲಿ ವಿಮಾನಗಳು ಲ್ಯಾಂಡ್​ ಆಗಿವೆ. 2001ರಿಂದ 2021ರ ಅವಧಿಯಲ್ಲಿ ಒಟ್ಟು 20 ಲೊಕೇಷನ್​​ಗಳಲ್ಲಿ ಸಹಾಯಹಸ್ತ ಚಾಚಲಾಗಿತ್ತು. ಮುಂದಿನ ದಿನಗಳಲ್ಲಿ ಉಳಿದ ಪ್ರದೇಶಗಳಿಗೂ ಹ್ಯುಮನಿಟೇರಿಯನ್​ ಏಡ್​ ಫ್ಲೈಟ್​ಗಳನ್ನ ಕಳಿಸ್ತೀವಿ ಅಂತ ವಿಶ್ವಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply