ತಾಲಿಬಾನ್-ಅಮೆರಿಕದ ಸಿಐಎ ಸೀಕ್ರೆಟ್ ಮೀಟಿಂಗ್! ಯಾಕೆ ಗೊತ್ತಾ?

masthmagaa.com:

ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ ಮುಖ್ಯಸ್ಥ ವಿಲಿಯಂ ಬರ್ನ್ಸ್ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್​​ ಜೊತೆ ​​​​​ಸೀಕ್ರೆಟ್ ಮೀಟಿಂಗ್ ಮಾಡಿದಾರೆ ಅಂತ ವಾಷಿಂಗ್ಟನ್ ಪೋಸ್ಟ್​ ವರದಿ ಮಾಡಿದೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಕಂಟ್ರೋಲ್​​​ಗೆ ತೆಗೆದುಕೊಂಡ ಬಳಿಕ ಬೈಡೆನ್ ಸರ್ಕಾರ ಮತ್ತು ತಾಲಿಬಾನಿಗಳ ನಡುವೆ ನಡೆದ ಉನ್ನತ ಮಟ್ಟದ ಸಭೆ ಇದಾಗಿದೆ. ಈ ಬರ್ನ್ಸ್​​​ ಬೈಡೆನ್ ಸರ್ಕಾರದ ಅನುಭವಿ ರಾಜತಾಂತ್ರಿಕರಾಗಿದ್ದು, ಅದೇ ರೀತಿ ಬರಾದರ್ ತಾಲಿಬಾನಿಗಳ ಟಾಪ್ ಲೀಡರ್​​ಗಳಲ್ಲಿ ಒಬ್ಬರಾಗಿದ್ದಾರೆ. ಇದ್ರಲ್ಲಿ ಯಾವ ವಿಚಾರ ಚರ್ಚೆಗೆ ಬಂದಿದೆ ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಅಫ್ಘಾನಿಸ್ತಾನದಿಂದ ಸ್ಥಳಾಂತರಕ್ಕೆ ಆಗಸ್ಟ್​ 31ರ ನಂತರವೂ ಸಮಯ ಬೇಕು ಅನ್ನೋ ಬಗ್ಗೆ ಚರ್ಚೆ ನಡೆದಿರೋ ಸಾಧ್ಯತೆ ಇದೆ. ಯಾಕಂದ್ರೆ ಅಷ್ಟರಲ್ಲಿ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಬಗ್ಗೆ ತಾಲಿಬಾನಿಗಳ ಜೊತೆ ಮಾತುಕತೆ ನಡೀತಾ ಇದೆ ಅಂತ ಕೂಡ ಪೆಂಟಗಾನ್ ತಿಳಿಸಿತ್ತು.

-masthmagaa.com

Contact Us for Advertisement

Leave a Reply