ರಂಜಾನ್ ಇದೆ..3 ದಿನ ದಾಳಿ ಬೇಡ ಎಂದ ತಾಲಿಬಾನ್!

masthmagaa.com:

ರಂಜಾನ್ ಹಬ್ಬ ಬಂದಿರೋದ್ರಿಂದ ತಾಲಿಬಾನ್ ಅಫ್ಗಾನಿಸ್ತಾನದಲ್ಲಿ 3 ದಿನಗಳ ಕದನ ವಿರಾಮ ಘೋಷಿಸಿದೆ. ಶಾಲೆಯೊಂದರ ಬಳಿ ನಡೆದ ದಾಳಿಯಲ್ಲಿ 50 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಈ ಕದನ ವಿರಾಮ ಘೋಷಿಸಲಾಗಿದೆ. ಈ ಮೂರು ದಿನ ಶತ್ರುಗಳ ಮೇಲೆ ಯಾವುದೇ ರೀತಿಯ ದಾಳಿ ನಡೆಸಬೇಡಿ.. ಆದ್ರೆ ಶತ್ರುಗಳು ನಿಮ್ಮ ಮೇಲೆ ದಾಳಿ ನಡೆಸಿದ್ರೆ ಎದುರಿಸಲು ಸಿದ್ಧವಾಗಿರಿ ಅಂತ ಕೂಡ ಸೂಚಿಸಲಾಗಿದೆ. ಆದ್ರೆ ಈ ಘೋಷಣೆ ಬೆನ್ನಲ್ಲೇ ಕಾಬೂಲ್​ನಲ್ಲಿ ಬಾಂಬ್ ದಾಳಿ ನಡೆದಿದ್ದುಮ, ಅದ್ರಲ್ಲಿ 11 ಮಂದಿ ಸಾವನ್ನಪ್ಪಿದ್ಧಾರೆ. 28 ಮಂದಿಗೆ ಗಾಯಗಳಾಗಿವೆ. ಕಳೆದ ವರ್ಷ ಕೂಡ ತಾಲಿಬಾನ್ ಇದೇ ರೀತಿಯ ಕದನ ವಿರಾಮ ಘೋಷಿಸಿತ್ತು.

-masthmagaa.com

Contact Us for Advertisement

Leave a Reply