ವಿಮಾನದಲ್ಲೇ ವ್ಯಕ್ತಿಯೊಬ್ಬನ ಹಂಗಾಮ! ದಂಗಾದ ಜನ!

masthmagaa.com:

ಅಮೆರಿಕದಲ್ಲಿ ವ್ಯಕ್ತಿಯೊಬ್ಬ ವಿಮಾನದಲ್ಲಿ ಹಂಗಾಮಾ ಮಾಡಿದ್ದಾನೆ. ಕಾಕ್​​ಪಿಟ್ ಒಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಸಾಧ್ಯವಾಗದೇ ಇದ್ದಾಗ ಎಮರ್ಜೆನ್ಸಿ ಡೋರ್​ನಿಂದ ಹೊರಗೆ ಹಾರಿದ್ದಾನೆ. ಲಾಸ್​​ಎಂಜಲೀಸ್​ನಿಂದ ಸಾಲ್ಟ್​ಲೇಕ್​ಗೆ ಹೊರಟಿದ್ದ ಯುನೈಟೆಡ್ ಎಕ್ಸ್​​ಪ್ರೆಸ್​​​​​ ವಿಮಾನದಲ್ಲಿ ಈ ಘಟನೆ ವರದಿಯಾಗಿದೆ. ವಿಮಾನವನ್ನು ಲಾಸ್​ ಏಂಜಲಿಸ್ ಏರ್​ಪೋರ್ಟ್​​​ನಲ್ಲಿ ರನ್​​​ವೇಗೆ ತರಲಾಗ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಸೀದಾ ಕಾಕ್​ಪಿಟ್​​ ಕಡೆಗೆ ನುಗ್ಗಿದ್ದಾನೆ. ಈ ವೇಳೆ ವಿಮಾನದ್ದವರು ಆತನನ್ನು ತಡೆದಿದ್ದು, ಇದ್ರಿಂದ ಸಿಟ್ಟಿಗೆದ್ದ ಆತ ಎಮರ್ಜೆನ್ಸಿ ಡೋರ್ ತೆಗೆದು ಹೊರಗೆ ಹಾರಿ, ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಮಾನ ಹಾರೋದು 3 ಗಂಟೆಗಳ ಕಾಲ ತಡವಾಯ್ತು. ಆತ ವಿಮಾನದಿಂದ ಹಾರಲು ಯತ್ನಿಸಿದ್ದು ಯಾಕೆ ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ. ಪ್ರಕರಣವನ್ನು ಎಫ್​​​​​ಬಿಐಗೆ ವಹಿಸಲಾಗಿದೆ. ಅಮೆರಿಕದಲ್ಲಿ ವಿಮಾನದಲ್ಲಿ ಗಲಾಟೆ ಮಾಡೋದು, ರನ್​ವೇಗೆ ಕಾರು ತಗೊಂಡು ಬರುವಂತಹ ಘಟನೆಗಳು ಜಾಸ್ತಿಯಾಗ್ತಿದ್ದು, ಈ ವರ್ಷದಲ್ಲೇ 3 ಸಾವಿರಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ.

-masthmagaa.com

Contact Us for Advertisement

Leave a Reply