ಆಸ್ಟ್ರಾಝೆನೆಕಾ ಲಸಿಕೆಯ ಡೀಲ್​​ನಲ್ಲೂ ಬ್ರೆಜಿಲ್​ನಲ್ಲಿ ಭ್ರಷ್ಟಾಚಾರ!

masthmagaa.com:

ಬ್ರೆಜಿಲ್ ಆರೋಗ್ಯ ಇಲಾಖೆ ಮತ್ತು ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ ಲಸಿಕೆ ಖರೀದಿಯ ಡೀಲ್​ನಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯೋಕೆ ಶುರುವಾದ ಬೆನ್ನಲ್ಲೇ ಆ ಡೀಲ್ ಅನ್ನ ಬ್ರೆಜಿಲ್ ಕ್ಯಾನ್ಸಲ್ ಮಾಡಿತ್ತು. ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸನಾರೋ ರಾಜೀನಾಮೆಗೆ ಆಗ್ರಹ ಜೋರಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬ್ರೆಜಿಲ್​ನಲ್ಲಿ ಲಸಿಕೆಗೆ ಸಂಬಂಧಿಸಿದ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದೆ. ಬ್ರೆಜಿಲ್ ಆರೋಗ್ಯ ಇಲಾಖೆಯಲ್ಲಿ ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥ ರಾಬರ್ಟೋ ಡಯಾಸ್​ ಎಂಬಾತ ಕಂಪನಿಯೊಂದರ ಮೂಲಕ 4 ಕೋಟಿ ಡೋಸ್​​ ಆಸ್ಟ್ರಾಝೆನೆಕಾ ಲಸಿಕೆ ಖರೀದಿಸಲು ಲಂಚ ಕೇಳಿದ್ದಾನೆ. ತನಗೆ ಒಂದು ಡೋಸ್​ಗೆ ಒಂದು ಡಾಲರ್​ ಕೊಡಬೇಕು. ಇಲ್ಲದಿದ್ರೆ ಈ ಡೀಲ್​ ಕುದುರದಂತೆ ಮಾಡ್ತೀನಿ ಅಂತ Davati Medical Supply ಕಂಪನಿಯ ಪ್ರತಿನಿಧಿಗೆ ಹೇಳಿದ್ದಾನೆ ಅಂತ ಬ್ರೆಜಿಲ್​ನ ದಿನಪತ್ರಿಕೆಯೊಂದು ವರದಿ ಮಾಡಿದೆ. ಜೊತೆಗೆ ತನ್ನ ವರದಿಯಲ್ಲಿ, Davati Medical Supply ಕಂಪನಿಯ ಪ್ರತಿನಿಧಿಯ ಹೇಳಿಕೆಯನ್ನ ಕೂಡ ಪ್ರಕಟಿಸಿದೆ. ಈ ವಿಚಾರ ಬೆಳಕಿಗೆ ಬರ್ತಿದ್ದಂತೇ ಬ್ರೆಜಿಲ್ ಆರೋಗ್ಯ ಇಲಾಖೆಯ ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥನನ್ನ ಜೇರ್ ಬೋಲ್ಸನಾರೋ ಕೆಲಸದಿಂದ ತೆಗೆದುಹಾಕಿದ್ದಾರೆ. ಹೀಗೆ ಎರಡೆರಡು ಲಸಿಕೆ ಹಗರಣದಿಂದಾಗಿ ಬ್ರೆಜಿಲ್​ ಅಧ್ಯಕ್ಷ ಜೇರ್​ ಬೋಲ್ಸನಾರೋ ರಾಜೀನಾಮೆಯ ಕೂಗು ಮತ್ತಷ್ಟು ಜೋರಾಗಿದೆ.

-masthmagaa.com

Contact Us for Advertisement

Leave a Reply