ಅತ್ಯಾಚಾರದ ಕುರಿತು ನೀಡಿದ್ದ ಹೇಳಿಕೆಗೆ ರಮೇಶ್ ಕುಮಾರ್ ಕ್ಷಮೆಯಾಚನೆ!

masthmagaa.com:

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನೀಡಿರೋ ಹೇಳಿಕೆಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್​​, ಅದು ಸಂದರ್ಭಕ್ಕೆ ಅನುಗುಣವಾದ ಒಂದು ಮಾತು.. ಒಂದ್ವೇಳೆ ಅದ್ರಿಂದ ಯಾವುದೇ ಮಹಿಳೆಯರಿಗೆ ನೋವಾಗಿದ್ರೆ ನಾನು ಯಾವುದೇ ಪ್ರತಿಷ್ಠೆಯಿಲ್ಲದೇ, ಪ್ರಾಮಾಣಿಕವಾಗಿ, ಶುದ್ಧವಾದ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸ್ತೀನಿ ಅಂತ ಹೇಳಿದ್ದಾರೆ.

ಬೆಳಗ್ಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​​​, ಕಾಂಗ್ರೆಸ್ನವರು ನನ್ನ ರೇಪ್ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾಗ ವಿವಾದವಾಗಲಿಲ್ಲ ಅಂತ ಹೇಳಿ ರಮೇಶ್ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡಿದ್ರು. ಆದ್ರೆ ನಂತರದಲ್ಲಿ ಇದು ನ್ಯಾಷನಲ್ ಸುದ್ದಿಯಾಗಿ, ಕೇಂದ್ರ ಕಾಂಗ್ರೆಸ್ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದ್ರು. ಇದಾದ್ಮೇಲೆ ದೆಹಲಿಯಿಂದ ಬಿಸಿ ಮುಟ್ಟಿಸಲಾಯ್ತೋ ಏನೋ.. ಮಧ್ಯಾಹ್ನ ಈ ಬಗ್ಗೆ ಪ್ರತಿಕ್ರಿಯಿಸಿರೋ ಡಿಕೆ ಶಿವಕುಮಾರ್​, ಈ ಹೇಳಿಕೆಯನ್ನುನಾವು ಖಂಡಿಸುತ್ತೀವಿ. ಇಂತಾ ಹೇಳಿಕೆಗಳು ಲಿಂಗ ಸಮಾನತೆಗೆ ವಿರುದ್ಧವಾಗಿದೆ ಅಂತೆಲ್ಲಾ ಟ್ವೀಟ್ ಮಾಡಿದ್ದಾರೆ.

ಇನ್ನು ರಮೇಶ್​ ಕುಮಾರ್​ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳೋದ್ಕಿಂತ ದೊಡ್ಡ ಶಿಕ್ಷೆ ಏನಾದ್ರೂ ಇದಿಯಾ ಅಂತ ಸಿದ್ದರಾಮಯ್ಯ ಹೇಳಿದ್ರೆ, ಈ ಸರ್ಕಾರಕ್ಕೆ ಯಾವ ಭಾಷೆಯಲ್ಲಿ ಹೇಳಬೇಕೋ ಆ ಭಾಷೆಯಲ್ಲಿ ರಮೇಶ್​ ಕುಮಾರ್​ ಹೇಳಿದ್ದಾರೆ ಅಂತ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜನರಿಗಾಗಿ ಒಳ್ಳೆಯ ಕಾನೂನುಗಳನ್ನು ರೂಪಿಸಲು ಇರೋ ಶಾಸಕರೇ ಸಂವೇದನಾಶೀಲ ವಿಚಾರಕ್ಕೆ ನಗ್ತಾರೆ. ಜನರ ಒಳಿತಿಗಾಗಿ ಇವರು ಹೇಗೆ ಕೆಲಸ ಮಾಡ್ತಾರೆ ಅನ್ನೋ ಪ್ರಶ್ನೆ ಮೂಡುತ್ತೆ. ಒಂದ್ಕಡೆ ಕಾನೂನು ರೂಪಿಸೋ ಅವರು ಮತ್ತೊಂದ್ಕಡೆ ಅತ್ಯಾಚಾರಕ್ಕೆ ಪ್ರಚೋದನೆ ಕೊಡ್ತಾರೆ. ಇಂಥವರಿಗೆ ಪಕ್ಷ ಟಿಕೆಟ್ ಕೊಡಬಾರದು ಅಂತ ಕಿಡಿಕಾರಿದೆ. ಇನ್ನು ದೆಹಲಿ ಮೂಲದ ಎನ್​ಜಿಒ ಒಂದು ರಮೇಶ್ ಕುಮಾರ್​ರನ್ನು ಈ ಕೂಡಲೇ ಅನರ್ಹಗೊಳಿಸಬೇಕು ಅಂತ ರಾಜ್ಯಪಾಲರಿಗೆ ದೂರು ನೀಡಿದೆ.

-masthmagaa.com

Contact Us for Advertisement

Leave a Reply